ಬಂಟ್ವಾಳ : ಜಲಿಯನ್ ವಾಲಾಬಾಗ್‌ನಲ್ಲಿ ಬೈಸಾಕಿ ಕಾರ್ಯಕ್ರಮಕ್ಕೆ ಸೇರಿದ್ದ 2500 ಜನರಲ್ಲಿ ಸಾಮಾನ್ಯರ, ಮಹಿಳೆಯರ, ಮಕ್ಕಳ ಮತ್ತು ಅಮಾಯಕರ ಮೇಲೆ ಜನರಲ್ ಡಯರ್ ನಡೆಸಿದ ಏಕಾಏಕಿ ಗುಂಡಿನ ದಾಳಿಯು ಅಕ್ಷರಶಃ ನರಮೇಧ. ಈ ದುರಂತದ ನಂತರ ಸ್ವಾತಂತ್ರ್ಯದ ದಿಕ್ಕು ಬದಲಾಗಿ ಉಧಾಮ್ ಸಿಂಗ್, ಭಗತ್ ಸಿಂಗ್ ಮುಂತಾದ ಅಸಂಖ್ಯಾತ ಕ್ರಾಂತಿಕಾರಿಗಳ ಉಗಮಕ್ಕೆ ಕಾರಣವಾಯಿತು. ಈ ಹತ್ಯಾಕಾಂಡವು ಒಂದು ಬ್ರಿಟೀಷರ ಅಮಾನವೀಯ ಕೃತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಭೌದ್ಧಿಕ್ ಪ್ರಮುಖ್ ಕೃಷ್ಣಪ್ರಸಾದ ಅವರು ನುಡಿದರು.
ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಇದರ ಮಾನವಿಕ ಸಂಘದಿಂದ ನಡೆದ” ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಶತಮಾನೋತ್ತರದ ನೆನಪು “ಎಂಬ ಕಾರ್ಯಕ್ರಮದಲ್ಲಿ  ಅವರು ವಿಶೇಷ ಉಪನ್ಯಾಸ ನೀಡಿದರು.
Screenshot_20190821_131017
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ವಹಿಸಿದ್ದರು.  ಹಿರಿಯರಾದ ಕಮಲಾ ಪ್ರಭಾಕರ ಭಟ್, ಆಡಳಿತ ಮಂಡಳಿಯ ಸದಸ್ಯರಾದ ಸೂರ್ಯನಾರಾಯಣ ಕಶೆಕೋಡಿ, ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ ಕಾಯರ್‌ಕಟ್ಟೆ ರವರು ಉಪಸ್ಥಿತರಿದ್ದರು.

 ದುರ್ಗಾಶ್ರೀ  ಸ್ವಾಗತಿಸಿ, ಶೀಬಾ ವಂದಿಸಿದರು. ನಿಖಿತಾ   ನಿರೂಪಿಸಿದರು..

Attachments area

 

By suddi9

Leave a Reply

Your email address will not be published. Required fields are marked *