ಕೋಲಾರ: ಗ್ರಾಮೀಣ ಪ್ರದೇಶದ ಸೇವೆ ಮಾಡದೆ ನಾಪತ್ತೆಯಾಗಿರುವ ಸರ್ಕಾರಿ ಪಶು ವೈದ್ಯರನ್ನು ಹುಡುಕಿಕೊಟ್ಟು, ಕಳಪೆ ಗುಣಮಟ್ಟದ ಹಿಂಡಿ ಬೂಸ ಮಾರಾಟ ಮಾಡುವ ಖಾಸಗಿ ಅಂಗಡಿಗಳ ಪರವಾನಗಿ ರದ್ದು ಮಾಡಿ ಪಶು ಇಲಾಖೆಯಲ್ಲಿ ದಾಸ್ತಾನು ಮಾಡಿದ್ದ ಕೊಠಡಿಗಳನ್ನು ಪರೀಶೀಲಿಸಿದಾಗ ಔಷಧಿಗಳನ್ನು ಸರಬರಾಜು ಮಾಡದೆ ಅವಧಿ ಮುಗಿದಿರುವ ಔಷದಿಗಳನ್ನು ದಾಸ್ತಾನು ಮಾಡಿರುವುದು ಕಂಡು ರೊಚ್ಚಿಗೆದ್ದ ಪ್ರತಿಭಟನಾಕಾರರು ಕೂಡಲೇ ಔಷದಿಗಳನ್ನು ಸರಬರಾಜು ಮಾಡಬೇಕೆಂಧು ಅಗ್ರಹಿಸಿ ರೈತ ಸಂಘದಿಂದ ಪಶುಪಾಲನಾ ಇಲಾಖೆಯ ಮುಂದೆ ಹೋರಾಟ ಮಾಡಿ ಉಪ ನಿರ್ದೇಶಕರಿಗೆ ಮನವಿ ನೀಡಿ ಅಗ್ರಹಿಸಲಾಯಿತು.
ಹೋರಾಟದ ನೇತೃತ್ವವಹಿಸಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಔಷಧಿಗಳನ್ನು ಕೊಠಡಿಯಲ್ಲಿ ಕೊಳೆಯುತ್ತಿದ್ದರು ಸಮರ್ಪಕವಾಗಿ ಸರಬರಾಜು ಮಾಡದೆ ದೂಳಿನಿಂದ ತುಂಬಿದ ಔಷದಿಗಳು, ವೈದ್ಯರನ್ನು ಕೇಳಿದರೆ ಔಷದಿಗಳನ್ನು ಸರಬರಾಜು ಆಗುತ್ತಿಲ್ಲ. ಎಂದು ಚೀಟಿಗಳನ್ನು ಬರೆದುಕೊಡುತ್ತಾರೆ ಕೇಂದ್ರ ಸ್ಥಾನವಾದ ಇಲಾಖೆಯಲ್ಲಿ ಅವದಿ ಮುಗಿದಿದ್ದರೂ ದಾಸ್ತಾನು ಮಾಡಿರುವ ಎಲ್ಲಾ ಔಷದಿಗಳನ್ನು ಇಲಾಖೆಯಲ್ಲಿಯೇ ದಾಸ್ತಾನು ಮಾಡಿ ದ್ರೋಹ ಬಗೆದಿದ್ದಾರೆ. ತೀವ್ರವಾದ ಬರಗಾಲದ ಜೊತೆಗೆ ಬೆಳೆ ನಷ್ಟದಿಂದ ಕೃಷಿಯಿಂದ ವಿಮುಕ್ತಿ ಹೊಂದಿ ಖಾಸಗಿ ಸಾಲಕ್ಕೆ ಸಿಲುಕಿ ತನ್ನ ಅಮೂಲ್ಯವಾದ ಜೀವನಕ್ಕೆ ಅಂತ್ಯ ಹೇಳುತ್ತಿರುವ ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿ ರೈತರ ಜೀವನವನ್ನು ಕಾಪಾಡುತ್ತಿರುವ ಹೈನೋದ್ಯಮ ಇಂದು ಪ್ರಥಮ ಸ್ಥಾನದಲ್ಲಿದೆ.
ಜೊತೆಗೆ ಜಿಲ್ಲೆಯಲ್ಲಿರುವ ಪಶು ಇಲಾಖೆ ಇದ್ದು ಇಲ್ಲದಂತಾಗಿದೆ. ಗ್ರಾಮೀಣ ಪ್ರದೇಶದ ಜನರ ಪಾಲಿಗೆ ಹಸುಗಳಿಗೆ ಬರುವ ನಾನಾ ಕಾಯಿಲೆಗಳಿಗೆ ಚಿಕಿತ್ಸೆ ನೀಡಬೇಕಾದ ಸರ್ಕಾರಿ ವೈದ್ಯರು ನಾಪತ್ತೆಯಾಗಿ ಖಾಸಗಿ ವೈದ್ಯರನ್ನು ಅವಲಂಭಿಸಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇನ್ನೂ ಹಿರಿಯ ಅದಿಕಾರಿಗಳನ್ನು ಕೇಳಿದರೆ ಬೇಜವಬ್ದಾರಿ ಉತ್ತರ ನೀಡುವ ಜೊತೆಗೆ ನಾವು ಬರುವವರೆಗೂ ಕಾಯ ಬೇಕು ಇಲ್ಲವಾದರೆ ನೀವು ಯಾರಿಗೆ ಬೇಕಾದರೂ ದೂರು ಕೊಟ್ಟು ಕೊಳ್ಳಿ ಎಂದು ರೈತ ವಿರೋಧಿ ದೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಪಶು ಇಲಾಖೆ ಎಂಬುದು ರೈತರ ಪಾಲಿಗೆ ಮರಣ ಶಾಸನ ಬರೆಯುವ ಇಲಾಖೆಯಾಗಿದೆ. ಔಷಧಿಗಳನ್ನು ದಾಸ್ತಾನು ಮಾಡಿರುವ ಕೊಠಡಿಗಳು ಕಸದ ತೊಟ್ಟಿಗಳಿಗಿಂತ ಕಡೆಯಾಗಿವೆ. ಹೋಬಳಿ ಮಟ್ಟದಲ್ಲಿರುವ ವೈದ್ಯರು ಹಣವಿಲ್ಲದೆ ಹಸುವನ್ನು ಸಹ ಮುಟ್ಟುವುದಿಲ್ಲ. ಮೇವು ಮತ್ತು ನೀರಿಗಾಗಿ ಕಿ.ಮೀ ಗಟ್ಟಲೆ ಅಲೆದಾಡಿ ಹಸುಸಾಕಾಣಿಕೆ ಮಾಡಿ ತನ್ನ ಸ್ವಾಭಿಮಾನ ಜೀವನ ನಡೆಸುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಪಶುಸಂಗೋಪನೆ ಇಲಾಖೆಯಿಂದ ಬರುವ ಅನುದಾನಗಳನ್ನು ಪಡಯಬೇಕಾದರೆ ಮುಳ್ಳಿನ ದಾರಿಯಾಗಿದೆ, ದಲ್ಲಾಳಿಗಳಿಲ್ಲದೆ ಯಾವುದೇ ಕೆಲಸ ಆಗದ ಜೊತೆಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ನೂರಾರು ಕೋಟಿ ರೂಪಾಯಿ ಅನುದಾನಗಳನ್ನು ನುಂಗಿ ನೀರು ಕುಡಿಯುತ್ತಿದ್ದಾರೆ.
ಮತ್ತೊಂದೆಡೆ ಸರ್ಕಾರಿ ಪಶು ವೈದ್ಯರಿಗೆ ಹಳ್ಳಿಗಳೆಂದರೆ ಅಸಹ್ಯವಾಗಿದೆ. ಹಳ್ಳಿಗೆ ಬಂದರೆ ಹಣ ನೀಡದೆ ಯಾವುದೇ ಚಿಕಿತ್ಸೆ ನೀಡದೆ ಔಷದಿಗಳನ್ನು ಸಹ ಖಾಸಗಿ ಅಂಗಡಿಗಳಿಗೆ ಬರೆದುಕೊಡುತ್ತಾರೆ. ಜೊತೆಗೆ ಖಾಸಗಿ ಅಂಗಡಿಗಳು ನೀಡುವ ಹಿಂಡಿ ಬೂಸ ಪಶು ಆಹಾರ ತೀವ್ರ ಕಳಪೆ ಗುಣಮಟ್ಟ ನೀಡುವ ಜೊತೆಗೆ ಅಂಗಡಿ ಮಾಲೀಕರು ಮಾಡುವ ಬೆಲೆ ನಿಗಧಿಗೆ ಹೈನೋದ್ಯಮ ಕುಟುಂಬಗಳು ತತ್ತರಿಸುತ್ತಿದ್ದಾರೆ. ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಸಿಬ್ಬಂದಿ ಕೊರತೆಯ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ನಿರ್ದೇಶಕರು ಮದು ಸೂದನ್ ರೆಡ್ಡಿರವರು ಇಲಾಖೆಯಲ್ಲಿ ಅವದಿ ಮುಗಿದಿರುವ ಔಷಧಿಗಳನ್ನು ತೆರವುಗೊಳಿಸಿ 1 ತಿಂಗಳ ಹಿಂದೆ ಔಷಧಿಗಳು ಬಂದಿರವುದು ಕೂಡಲೇ ಔಷಧಿಗಳನ್ನು ಸರಬರಾಜು ಮಾಡುತ್ತೇವೆ ಜೊತೆಗೆ ಸರ್ಕಾರಿ ವೈದ್ಯರು ಗ್ರಾಮೀಣ ಪ್ರದೇಶಗಳ ಸೇವೆ ಮಾಡದ ಬಗ್ಗೆ ಹೆಚ್ಚಾಗಿ ಸಾರ್ವಜನಿಕ ದೂರುಗಳು ಬಂದಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳುವ ಜೊತೆಗೆ ಯಾವುದೇ ಕಾರಣಕ್ಕೂ ಔಷಧಿಗಳನ್ನು ಖಾಸಗಿ ಅಂಗಡಿಗಳಿಗೆ ಬರೆದು ಕೊಡಬಾರದು ಜೊತೆಗೆ ಹಿಂಡಿ ಬೂಸ ಕಳಪೆ ಪಶು ಆಹಾರ ನೀಡುವ ಅಂಗಡಿಗಳ ವಿರುದ್ದ ಕ್ರಮ ಕೈಗೊಳ್ಳುವ ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ,ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾ ಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ, ಸುಪ್ರೀಂ ಚಲ, ನಾರಾಯಣ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಮಂಜುನಾಥ್, ಶ್ರೀ,ತಾ.ತೆರ್ನಹಳ್ಳಿ ಆಂಜಿನಪ್ಪ, ರಂಜಿತ್, ಸಾಗರ್, ಚಂದ್ರಪ್ಪ, ಪುತ್ತೇರಿ ರಾಜು, ಮುಂತಾವರಿದ್ದರು