ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಿಂದುಳಿದ ಜಾತಿಗಳ ಒಕ್ಕೂಟ ಮಂಗಳೂರು (ರಿ) ಇದರ 2018-19ನೇ ಸಾಲಿನ ಮಹಾಸಭೆಯು ದಿ.20.08.2019ರಂದು ಅಧ್ಯಕ್ಷ ನವೀನ್ಚಂದ್ರ ಡಿ ಸುವರ್ಣರವರ ಅದ್ಯಕ್ಷತೆಯಲ್ಲಿ ಜರಗಿ ಒಕ್ಕೂಟದ 2019-2020, 2020-2021 ಮತ್ತು 2021-2022ನೇ ಮೂರು ವರ್ಷಗಳ ಅವಧಿಗೆ ಒಕ್ಕೂಟವನ್ನು ಸಂಘಟಿಸಿ 30 ವರ್ಷಗಳ ಕಾಲ ಸತತ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಹಿರಿಯ ಕಾರ್ಯಕರ್ತ ಯಂ ಜಯಾನಂದ ದೇವಾಡಿಗರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆರಿಸಲಾಯಿತು.
ಉಪಾಧ್ಯಕ್ಷರಾಗಿ ಮೋನಪ್ಪ ಕುಳಾಯಿ, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ ಎಲ್ ಬಂಗೇರ, ಉಪಕಾರ್ಯದರ್ಶಿಗಳಾಗಿ ಕೆ ಆರ್ ನಾಥ್ ಹಾಗೂ ಎಚ್ ಎ ಗೋಪಾಲ್, ಕೋಶಾಧಿಕಾರಿಯಾಗಿ ಧನಂಜಯ ಕೊಟ್ಟಾರಿ ಇವರನ್ನು ಆರಿಸಲಾಯಿತು. ಪಿ ಟಿ ರಾಮ ಸಫಲಿಗ, ರಮೇಶ ಬಂಗೇರ, ಎ ಕೆ ಭಂಡಾರಿ, ಭಾಸ್ಕರ ಕುಲಾಲ್ ಬರ್ಕೆ, ಪಿ ಎನ್ ಸುಭಾಶ್ಚಂದ್ರ, ಬಿ ಮೋಹನ ನಾೈಕ್, ಬಿ ಕೆ ಕೃಷ್ಣಮೂರ್ತಿ, ವಸಂತ ಎಂ ಬೆಳ್ಳೂರು, ಬಿ ಲಲಿತ ಕುಮಾರ್, ಪ್ರವೀಣ ಕುಮಾರ್ ಮತ್ತು ಮೋಹಿನಿ ಕೆ ಗಟ್ಟಿಯವರನ್ನು ಆರಿಸಲಾಯಿತು. ಅಲ್ಲದೆ ಒಕ್ಕೂಟದ ಸಾಂಘಿಕ ಸದಸ್ಯ ಸಂಘಗಳವರು ನಿಯುಕ್ತಗೊಳಿಸುವ ಅವರ ಪ್ರತಿನಿಧಿಗಳನ್ನು ಮತ್ತು ವೈಯಕ್ತಿಕ ಸದಸ್ಯರಲ್ಲಿ ಎಲ್ಲಾ ಹಿಂದುಳಿದ ಜಾತಿಗಳವರಿಗೆ ಪ್ರಾತಿನಿಧ್ಯ ನೀಡುವಂತೆ ಸದಸ್ಯರನ್ನು ಆಡಳಿತ ಮಂಡಳಿಗೆ ಸೇರಿಸಿಕೊಳ್ಳಲು ನೂತನ ಆಡಳಿತ ಮಂಡಳಿಗೆ ಅಧಿಕಾರ ಕೊಡಲಾಯಿತು.