ಬಂಟ್ವಾಳ : ವೇದಿಕೆಯಲ್ಲಿ ಹೂವಿನಿಂದ ಅಲಂಕೃತವಾದ ತೊಟ್ಟಿಲಲ್ಲಿ ಮುದ್ದುಕೃಷ್ಣ ನಿದ್ದೆಗೆ ಜಾರಿದ ದೃಶ್ಯ ಎಲ್ಲರ ಗಮನಸೆಳೆದದ್ದು,ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಅಕ್ಕಮಹಾದೆರವಿ ಶಿಶುಮಂದಿರದಲ್ಲಿ.. ಶನಿವಾರ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಅಜ್ಜಿಬೆಟ್ಟು ಶಾಲ ಮೈದಾನದಲ್ಲಿ ಸ್ನೇಹಾಂಜಲಿ ಸೇವಾ ಸಂಘದ ವತಿಯಿಂದ 27 ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು.
ಈ ಪ್ರಯುಕ್ತ ಇಲ್ಲಿನ ಶಿಶುಮಂದಿರದಲ್ಲಿ 3 ರಿಂದ 5 ವರ್ಷದ ಪುಟಾಣಿಗಳಿಗೆ ಶ್ರೀಕೃಷ್ಣನ ಸಂಬಂಧ ವಿವಿಧ ಶೈಲಿಯ ಕಾರ್ಯಕ್ರಮಗಳು ನಡೆಯಿತು.ಈ ಸಂದರ್ಭ ವೇದಿಕೆಯಲ್ಲಿ ತಾಯಿಯ ಮಡಿಲು ತುಂಬಿಸಿ ನಂತರ ತಾಯಿ , ಮುದ್ದುಕೃಷ್ಣನಿಗೆ ಮುತೈದರಿಂದ ಆರತಿ ಬೆಳಗಿಸಿ ಮುದ್ದುಕೃಷ್ಣನನ್ನು ಅಲ್ಲೇ ಹೂವಿನಿಂದ ಅಲಂಕೃತವಾದ ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡಲಾಯಿತು.
ಮುದ್ದುಕೃಷ್ಣನ ವೇಷದ ಈ ಮಗು ಜೋಗುಳಕ್ಕೆ ತೊಟ್ಟಿಲಲ್ಲೆ ನಿದ್ದೆಗೆ ಜಾರಿತು. ಅಜ್ಜಿಬೆಟ್ಟು ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯಿನಿ ಕುಶಲ ಮೊಸರುಕುಡಿಕೆ ಉತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕೃಷಿಕ ಮೋಹನ ಪೂಜಾರಿ,ಸಮಿತಿಯ ಗೌರವಾದ್ಯಕ್ಷ ಪ್ರಮೋದ್ ಕುಮಾರ್, ಅಧ್ಯಕ್ಷ ಉದಯ ಅಮೀನ್, ಕಾರ್ಯದರ್ಶಿ ಜಯಂತ ಅಗ್ರಬೈಲು, ಕೋಶಾಧಿಕಾರಿ ನಿತಿನ್ ಮಿತ್ತಬೈಲು, ನಿವೃತ್ತ ಬ್ಯಾಂಕ್ ಅಧಿಕಾರಿ ಬೇಬಿ ಕುಂದರ್, ನಾಗೇಶ್ ಅಜ್ಜಿಬೆಟ್ಟು, ರಾಜೇಶ್ ಅಜ್ಜಿಬೆಟ್ಟು, ಲಕ್ಷ್ಮಣ ಅಗ್ರಬೈಲು ಉಪಸ್ಥಿತರಿದ್ದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಶಿಶುಮಂದಿರದ ಶಿಕ್ಷಕಿಯರಾದ ಶಶಿಪ್ರಭಾ, ನೀತಾ ಕಾರ್ಯಕ್ರಮಕ್ಕೆ ಸಹಕರಿಸಿದರು.