ಬಂಟ್ವಾಳ:ಆಶೀರ್ವಾದ ಸೇವಾ ಸಂಘ ಮತ್ತು  ಆಶೀರ್ವಾದ ಮಹಿಳಾ ಸೇವಾ ಸಂಘ ತುಂಬೆ ಇದರ ಜಂಟಿ ಆಶ್ರಯದಲ್ಲಿ ತುಳುವೆರೆ ಗಮ್ಮತ್ ಕಾರ್ಯಕ್ರಮ ತುಂಬೆಯ ಮುದಲ್ಮೆ ಎಂಬಲ್ಲಿ ಭಾನುವಾರ ವಿಜ್ರಂಭಣೆಯಿಂದ ನಡೆಯಿತು.BTW_AUG25_3A
ಬೆಳಿಗ್ಗೆ ರೋಟರಿ ಬಂಟ್ವಾಳ ಟೌನ್‍ನ ಕಾರ್ಯದರ್ಶಿ ಪಲ್ಲವಿ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಕ್ಕಳು, ಮಹಿಳೆಯರು, ಯುವಕರು ಹಾಗೂ ಹಿರಿಯರಿಗೆ ತುಳುನಾಡಿನ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

BTW_AUG25_3B

 

ತೆಂಗಿನ ಗರಿ ಎಣೆಯುವುದು, ತೆಂಗಿನ ಕಾಯಿ ತುರಿಯುವುದು, ಪಾಡ್ದನ ಹೇಳುವುದು, ಮಡಿಕೆ ಹೊಡೆತ, ಓಟ, ಕಬಡ್ಡಿ, ಗೋಣಿ ಚೀಲ ಓಟ, ಲಗೋರಿ, ಜಿಬಿಲಿ, ಗೋಲಿಯಾಟಗಳು ನಡೆಯಿತು. ಸ್ಥಳೀಯರು ಮಕ್ಕಳು ಹಿರಿಯರೆನ್ನದೆ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿಸಂಭ್ರಮಿಸಿದರು.

BTW_AUG25_3C
ತಾಲೂಕು ಪಂಚಾಯಿತಿ ಸದಸ್ಯ, ಆಶೀರ್ವಾದ ಯುವಕ ಸಂಘದ ಗೌರವಾದ್ಯಕ್ಷ ಗಣೇಶ್ ಸುವರ್ಣ ತುಂಬೆ ಮಾತನಾಡಿ ಕಳೆದ ಏಳು ವರ್ಷಗಳಿಂದ ಆಟಿದ ಕೂಟ ನಡೆಸುತ್ತಿದ್ದೇವೆ. ಈ ಬಾರಿ, ಭಾರಿ ಮಳೆಯಿಂದಾಗಿ ಆಟಿಡೊಂಜಿ ದಿನ ನಡೆಸಲು ಸಾಧ್ಯವಾಗದೆ ಇದ್ದುದರಿಂದ ತುಳುವೆರೆ ಗಮ್ಮತ್ ಕಾರ್ಯಕ್ರಮ ನಡೆಸಿದ್ದೇವೆ ಎಂದರು.

BTW_AUG25_3Dತುಂಬೆ ಗ್ರಾ.ಪಂ.ಅಧ್ಯಕ್ಷೆ ಹೇಮಲತಾ ಜಿ. ಪೂಜಾರಿ, ಸಂಘದ ಅಧ್ಯಕ್ಷ ವಿಶ್ವನಾಥ, ಕಾರ್ಯದರ್ಶಿ ಯಶವಂತ ಕೊಟ್ಟಿಂಜ, ಕೋಶಾಧಿಕಾರಿ ಕೇಶವ ಬೊಳ್ಳಾರಿ, ಮಹಿಳಾ ಸಂಘದ ಅಧ್ಯಕ್ಷೆ ಪಾರ್ವತಿ, ಕಾರ್ಯದರ್ಶಿ ಲಕ್ಷ್ಮೀ,ಕೋಶಾಧಿಕಾರಿ ಚಿತ್ರ ಹಾಜರಿದ್ದರು.

By suddi9

Leave a Reply

Your email address will not be published. Required fields are marked *