ಬಂಟ್ವಾಳ : ಜೈನ್ ಮಿಲನ್ ಇದರ ಆಗಸ್ತ್ ತಿಂಗಳ ಮಾಸಿಕ ಮಹಾಸಭೆಯು ವಿಷೇಶ ಜಿನ ಭಜನೆಗಳನ್ನು ಸ್ತುತಿಸುವ ಮೂಲಕ ಪ್ರಥಮ ಸೋಣ ಶುಕ್ರವಾರದಂದು ಪಾಣೆಮಂಗಳೂರಿನ ಶ್ರೀ
ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯ ದಲ್ಲಿ ಜರಗಿತು. ಮಿಲನ್ ಅಧ್ಯಕ್ಷ ಡಾ.ಸುದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಭಜನೆಯಿಂದ ದೇವರುಗಳ ಇತಿಹಾಸ ವನ್ನು ತಿಳಿಯುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ಶಾಂತಿ ಮನಸ್ಸಿನ ಏಕಾಗ್ರತೆಯನ್ನುಪಡೆಯಬಹುದು.

ಭಜನೆಯಿಂದ ವಿಭಜನೆ ಇಲ್ಲ ಎಂಬ ಬಲ್ಲವರ ಮಾತನ್ನು ನೆನಪಿಸುತ್ತಾ ಮೂಡಬಿದ್ರೆ ಎಕ್ಸೆಲೆಂಟ್ ಕಾಲೇಜಿನ ರ ಶ್ಮಿತಾ ಯುವರಾಜ್ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜಿನಭಜನೆ ಗೀತ ರಚನೆಕಾರರಾದ ಮೂಡಬಿದ್ರೆ ವೀಣಾ ರಘುಚಂದ್ರ ಶೆಟ್ಟಿ ಜೈನ್ ಮಿಲನ್ ವತಿಯಿಂದ ಸನ್ಮಾನಿಸಲಾಯಿತು.

KAR_3138
ಜೈನ್ ಮಿಲನ್ ನ ಕಾರ್ಯಚಟುವಟಿಕೆಗಳ ಬಗ್ಗೆ ,ಯುವಕರ ಪಾಲ್ಗೊಳ್ಳುವಿಕೆ ಬಗ್ಗೆ ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ನುಡಿದರು. ಶ್ರಾವಣ ಮಾಸದ ಶುಭ ಅವಧಿಯಲ್ಲಿ
ಸತ್ಕಾರ್ಯಗಳನ್ನು ಮಾಡಲು ಯೋಗ್ಯವಾದ ಸಮಯ. ಮಹಾಮಾತೆ ಶ್ರೀ ಪದ್ಮಾವತಿ ದೇವಿಯ ಆರಾದನೆಯಿಂದ ಸಕಲ ಸಂಕಷ್ಟಗಳು ನಿವಾರಣೆಯಾಗುವುದು. ಸಮ್ಮಾನಿತಗೊಂಡ ವೀಣಾ
ರಘುಚಂದ್ರ ಶೆಟ್ಟಿಯವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದು ಭಾರತೀಯ ಜೈನ್ ಮಿಲನ್ವ ಲಯ-8ರ ಉಪಾಧ್ಯಕ್ಷ ಸುದರ್ಶನ್ ಜೈನ್ನುಡಿದರು.

ನಿರ್ದೇಶಕ ಧನ್ಯ ಕುಮಾರ್ ರೈ ಬಂಟ್ವಾಳ ಜೈನ್ ಮಿಲನ್ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು. ಜಿನ ಭಜನೆ ಮಾಡಿದ ಎಲ್ಲ ಭಜಕರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಸನ್ಮತಿ ಜಯಕೀರ್ತಿ ಸ್ವಾಗತಿಸಿದರು. ಗೀತಾ ಜಿನಚಂದ್ರ ವಂದಿಸಿ ವಿಜಯಕುಮಾರಿ ಇಂದ್ರ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *