ಬಂಟ್ವಾಳ: ಪಾತ್ ವೇ ಲರ್ನಿಂಗ್ ಅಕಾಡೆಮಿ ಮತ್ತು ಬಿ.ಸಿ.ರೋಡಿನ ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಆಶ್ರಯದಲ್ಲಿ ಬಿ.ಮೂಡ ಅಜ್ಜಿಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಒಂದು ದಿನದ ಜೀವನ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ನಡೆಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ನೋಣಯ್ಯ ನಾಯ್ಕ್ ಮಾತನಾಡಿ ಮಕ್ಕಳಲ್ಲಿ ಜೀವನ ಕೌಶಲ್ಯಗಳನ್ನು ವೃದ್ಧಿಸುವ ಜತೆಗೆ ಉನ್ನತ ಶಿಕ್ಷಣ ಮತ್ತು ವೃತ್ತಿ ಪ್ರಪಂಚದ ಅರಿವು ಮೂಡಿಸುವಲ್ಲಿ ಈ ಕಾರ್ಯಾಗಾರ ಉಪಯುಕ್ತವಾಗಿದೆ ಎಂದರು.
ಬಿ.ಸಿ.ರೋಡು ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರಿನ ತರಬೇತುದಾರರಾದ ಎ.ಗೋಪಾಲ ಅಂಚನ್ ಮತ್ತು ಪ್ರತಿಮಾ ಜಿ.ಅಂಚನ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿದರು.
ಶಿಕ್ಷಕ ರಮೇಶ ನಾಯಕ್ ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು. ಶಿಕ್ಷಕಿ ಅನಿತ ಸ್ವಾಗತಿಸಿದರು.
