ಬಂಟ್ವಾಳ:   ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ   ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ಕಾರ್ಮೆಲ್ ಕಾಲೇಜು ಬಳಿಯಲ್ಲಿರುವ    ಜನಾರ್ದನ ಹೊಳ್ಳ ಅವರ ಮನೆಗೆ ನುಗ್ಗಿ   ಮನೆ ಯಜಮಾನನಿಗೆ  ಹಲ್ಲೆಗೈದು ಚಿನ್ನದ ಸರ  ಲೂಟಿಗೈದ  ಪ್ರಕರಣಕ್ಕೆ ಸಂಬಂಧಿಸಿದಂತೆ   ಇಬ್ಬರು ಆರೋಪಿಗಳಿಗೆ ಜಿಲ್ಲಾ ಪ್ರಧಾನ ಮತ್ತು  ಸತ್ರ ನ್ಯಾಯಾಲಯವು 7 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ  ವಿಧಿಸಿ  ತೀರ್ಪು ನೀಡಿದೆ.            ಪ್ರವೀಣ್ ಹೊಸನಗರ ಹಾಗೂ ಸಂಜು ವಿರಾಜಪೇಟೆ   ಶಿಕ್ಷೆ ಗೊಳಗಾದ ಆಪರಾಧಿಗಳು

ಘಟನೆಯ ವಿವರ:
2018 ಅಗಸ್ಟ್ 8 ರಂದು ರಾತ್ರಿ 9.30 ಗಂಟೆಯ ವೇಳೆ ಜನಾರ್ದನ ಹೊಳ್ಳ ಅವರು ಮನೆಯಲ್ಲಿ ಟಿ.ವಿ. ನೋಡುತ್ತಾ ಕುಳಿತ್ತಿದ್ದಾಗ      ಹೊರಗಡೆ ಬೆಲ್ ಹೊಡೆದ ಶಬ್ದವಾಯಿತು. ಅವರು
ಬಾಗಿಲು ಚಿಲಕ ತೆರೆದಾಗ ಇಬ್ಬರು ಅಪಚಿರಿತ ವ್ಯಕ್ತಿಗಳು ಇವರನ್ನು ಕುತ್ತಿಗೆಗೆ ಕೈಹಾಕಿ ಮನೆಯೊಳಗೆ ದೂಡಿ ಹಾಕಿದರು.
ಬಳಿಕ ಬೆದರಿಸಿ ಕುತ್ತಿಗೆಯಲ್ಲಿದ್ದ ಮೂರು ಪವನ್ ನ  75 ಸಾವಿರ ಮೌಲ್ಯದ ಚಿನ್ನದ ಸರವನ್ನು ಬಲವಂತವಾಗಿ ಕಸಿದು ಪರಾರಿಯಾಗಿದ್ದರು,  ಈ  ಘಟನೆಯಿಂದ ಹೊಳ್ಳ ಅವರ ಕುತ್ತಿಗೆ ಹಾಗೂ ತಲೆಗೆ ಗಾಯವಾಗಿತ್ತು.ಪತ್ನಿ ಮನೆಯೊಳಗೆ ಬಂದು
ನೋಡಿದಾಗ  ಘಟನೆ  ಬೆಳಕಿಗೆ ಬಂತು.
ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದಲ್ಲಿ  ಪ್ರಕರಣ ದಾಖಲಾಗಿತ್ತು,   ಅಗಿನ ಎಸ್.ಐ. ಗಳಾದ  ಹರೀಶ್,  ಚಂದ್ರಶೇಖರ  ಅವರು   ಘಟನೆಯ ಎರಡು ವಾರಗಳ ಬಳಿಕ ಆರೋಪಿಗಳನ್ನು ಬಂಧಿಸಿದ್ದರು. ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ   ದೋಷಾರೋಪಣಪಟ್ಟಿ ಸಲ್ಲಿಸಿದ್ದರು.

By suddi9

Leave a Reply

Your email address will not be published. Required fields are marked *