ಬಂಟ್ವಾಳ: ಪಿಲಾತಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ದಿಡೀರ್ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಅಲ್ಲಿನ ಸಮಸ್ಯೆ ಗಳ ಬಗ್ಗೆ ಸಾರ್ವಜನಿರು ಶಾಸಕರ ಗಮನಕ್ಕೆ ತಂದರು.ಈ ಆಸ್ಪತ್ರೆಯಲ್ಲಿ ಪೂರ್ಣಾವಧಿ ವೈದ್ಯಾಧಿಕಾರಿ ಇಲ್ಲದೆ ಸಾಕಷ್ಟು ತೊಂದರೆಯಾಗುತ್ತಿದೆ.ವಾರಕ್ಕೆ ಎರಡು ಬಾರಿ ವೈದ್ಯರು ಸೇವೆ ಕ್ಕೆ ಲಭ್ಯವಿರುವುದು ಸಾಕಷ್ಟು ತೊಂದರೆ ಯಾಗುತ್ತಿದೆ ಎಂದು ಶಾಸಕರಲ್ಲಿ ಅಳಲು ತೋಡಿಕೊಂಡರು.6

ಹೆದ್ದಾರಿಯಲ್ಲಿ ಈ ಆಸ್ಪತ್ರೆ ಇದ್ದು ಅಪಘಾತ ಸಹಿತ ಅನೇಕ ಘಟನೆಗಳಿಗೆ ಈ ಅಸ್ಪತ್ರೆ ಬಹಳ ಅಗತ್ಯವಾಗಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಸಮುದಾಯ ಆರೋಗ್ಯ ಕೇಂದ್ರ ವಾಗಿ ಮೇಲ್ದರ್ಜೆಗೆ ಏರಿಸಲು ಮನವಿ ಮಾಡಿದರು.ವೈದ್ಯರಿಲ್ಲದೆ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾತ್ಕಾಲಿಕ ವಾಗಿ ಬೇರೆ ವೈದ್ಯರ ನೇಮಕ ಮಾಡುವ ಭರವಸೆ ಯನ್ನು ಶಾಸಕರು ಈ ಸಂದರ್ಭದಲ್ಲಿ ನೀಡಿದರು.5

ಜಿಪಂ.ಸದಸ್ಯ ತುಂಗಪ್ಪ ಬಂಗೇರ, ಗ್ರಾ.ಪಂ.ಅದ್ಯಕ್ಷ ಶೇಖರ್ ಶೆಟ್ಟಿ , ತಾ.ಪಂಸದಸ್ಯ ರಮೇಶ್ ಕುಡುಮೇರು,ಗ್ರಾ.ಪಂ.ಸದಸ್ಯರಾದ ಲಕ್ಮೀ ಜೆ ಬಂಗೇರ, ಪಿಲಾತಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲಕ್ಮೀನಾರಾಯಣ ಉಡುಪ, ಹಾಗೂ ಡಾ! ಸೋಹನ್ ಕುಮಾರ್  ಮತ್ತು ಸಿಬ್ಬಂದಿ ಗಳು ಮತ್ತಿತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *