ಕೋಲಾರ: ಮಾಲೂರು ಆರಕ್ಷಕ ವೃತ್ತ ನಿರೀಕ್ಷಕ ಸತೀಶ್ ತಮ್ಮನ್ನು ಗಲ್ಲಿಗೇರಿಸಿ ಕೊಲ್ಲುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ತೊರ್ನಹಳ್ಳಿ ಗ್ರಾಮ ನಿವಾಸಿ ರಾಮಕೃಷ್ಣಪ್ಪ ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗೆ ದೂರು ನೀಡಿದರು.ಬೆಂಗಳೂರು ಮೂಲದ ಹೇಮಾವತಿ ಮತ್ತು ಸಂಗಡಿಗರ ಪರವಾಗಿ ತಮಗೆ ಫೋನ್ ಮೂಲಕ ಜೀವ ಬೆದರಿಕೆ ಹಾಕಿರುವ ಆರಕ್ಷಕ ವೃತ್ತ ನಿರೀಕ್ಷಕ ಸತೀಶ್ ನನ್ನನ್ನು ಈ ಕೂಡಲೇ ನನ್ನ ಜಮೀನಿಂದ ಹೊರ ಹೋಗುವಂತೆ, ನನ್ನ ಜಮೀನಿನಲ್ಲಿ ಹೇಮಾವತಿ ಹಾಗೂ ಅವರ ಸಂಗಡಿಗರಿಗೆ ಸ್ವಾಧೀನಾನುಭವ ಬಿಟ್ಟುಕೊಡುವಂತೆ ಧಮ್ಕಿ ಹಾಕಿದ್ದಾರೆ ಎಂದು ಅವರು ದೂರಿದರು.28nbk1 news

ನನಗೆ ಬುದ್ದಿ ಬಂದಾಗಿನಿಂದ ನಾನು ಮಾಲೂರು ತಾಲ್ಲೂಕಿನ ತೊರ್ನಹಳ್ಳಿ ಗ್ರಾಮದ ಸರ್ವೇ ನಂ.149/2, 151/2, 28/1, 31/2, 33/2ರಲ್ಲಿನ ಜಮೀನುಗಳನ್ನು ಸಾಗುವಳಿ ಮಾಡಿಕೊಂಡು ಸ್ವಾಧೀನಾನುಭವದಲ್ಲಿದ್ದೇನೆ. ನನಗೆ ಬುದ್ದಿ ಬರುವ ಮುನ್ನ ನನ್ನ ತಂದೆ ಚಿಕ್ಕ ವೆಂಕಟಪ್ಪ ಈ ಜಮೀನುಗಳ ಸಾಗುವಳಿ ಮಾಡಿಕೊಂಡಿದ್ದರು. ಈ ಜಮೀನುಗಳನ್ನು ನಮಗೆ ವಿಲ್ಲು ಮೂಲಕ ಚಿಕ್ಕ ಪೂವ್ವಣ್ಣ ನೀಡಿದ್ದರು. ಆದರೀಗ ಹೇಮಾವತಿ ಹಾಗೂ ಇತರರು ಆರಕ್ಷಕ ವೃತ್ತ ನಿರೀಕ್ಷಕರಿಂದ ನನ್ನನ್ನು ಬೆದರಿಸಿ ನನ್ನನ್ನು ಜಮೀನು ಹೊರ ಹಾಕಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.ಜಮೀನುಗಳ ವಿವಾದ ಸಂಪೂರ್ಣವಾಗಿ ಸಿವಿಲ್ ಸ್ವರೂಪವಾಗಿವೆ. ಸದರಿ ಜಮೀನುಗಳ ಹಕ್ಕುಧಾರಿಕೆ ಕೋರಿ ಈಗಾಗಲೇ ಮಾಲೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ದಾಖಲಿಸಿದ್ದೇನೆ. ಹೀಗಾಗಿ ಪ್ರಕರಣವು ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿದೆ. ಆದರೂ ಹೇಮಾವತಿ ಹಾಗೂ ಸಂಗಡಿಗರಿಗೆ ಅನುಕೂಲ ಮಾಡುವ ದುರುದ್ಧೇಶದಿಂದ ಆರಕ್ಷಕ ವೃತ್ತ ನಿರೀಕ್ಷಕರು ನನಗೆ ಮಾನಸಿಕ, ಧೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ನಾನು ಬಾಲಕನಾಗಿದ್ದಾಗ ನನ್ನ ಹೆಸರಿಗೆ ಚಿಕ್ಕಪೂವ್ವಣ್ಣ ಜಮೀನುಗಳನ್ನು 1974ರಲ್ಲಿಯೇ ವಿಲ್ಲು ಮೂಲಕ ಹಸ್ತಾಂತರಿಸಿದ್ದರು. ಚಿಕ್ಕಪೂವ್ವಣ್ಣನ ಮಗ ಪೂಜಪ್ಪನನ್ನು ಆತನ ಪತ್ನಿ ಹೇಮಾವತಿಯೇ ವಿಷ ಹಾಕಿ ಕೊಂದಿದ್ದಾರೆಂದು ಅನುಮಾನಟ್ಟು ಅವರು ತನ್ನ ಯಾವುದೇ ಆಸ್ತಿ ಹೇಮಾವತಿ ಹಾಗೂ ಅವರ ಸಂಗಡಿಗರಿಗೆ ದಕ್ಕಬಾರದೆಂದು ಇಚ್ಛಿಸಿ ನನಗೆ ವಿಲ್ ಮಾಡಿದ್ದರು ಎಂದು ತಿಳಿಸಿದರು.ಚಿಕ್ಕಪೂವ್ವಣ್ಣನ ಅಂತಿಮ ಇಚ್ಛೆಯನ್ನು ಅವರ ವಿಲ್ಲು ವ್ಯಕ್ತಪಡಿಸುತ್ತದೆ. ಅವರು ನೀಡಿದ ಎಲ್ಲಾ ಜಮೀನುಗಳು ಅವರ ಸ್ವಯಾರ್ಜಿತ ಆಸ್ತಿಗಳೇ ಆಗಿವೆ. ಅವರಿಗೆ ಹೇಮಾವತಿ ಬಗ್ಗೆ ತುಂಬಾ ಬೇಸರ ಇದ್ದಿದ್ದರಿಂದಾಗಿ ಜಮೀನುಗಳು ಅವರ ಪಾಲಾಗಬಾರದೆಂದು ಮುಂಜಾಗ್ರತೆ ವಹಿಸಿ ವಿಲ್ಲು ಬರೆದಿದ್ದರು ಎಂದರು.

ಆದರೂ ಚಿಕ್ಕಪೂವ್ವಣ್ಣನ ನಿಧನಾನಂತರ ಹೇಮಾವತಿ ಜಮೀನುಗಳನ್ನು ಗುಟ್ಟಾಗಿ ಸಂಬಂಧಿಸಿದ ಕಂದಾಯ ಅಧಿಕಾರಿಗಳೊಡನೆ ಶಾಮೀಲಾಗಿ ತಮ್ಮ ಹೆಸರುಗಳಿಗೆ 1985ರಲ್ಲಿ ಖಾತೆ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಚಿಕ್ಕಪೂವ್ವಣ್ನನ ಅಂತಿಮ ಇಚ್ಛೆಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಈ ರೀತಿಯಾಗಿ ಮಾಲೂರಿನಲ್ಲಿದ್ದುಕೊಂಡು ಜಮೀನುಗಳ ದಾಖಲೆಗಳನ್ನು ಅಕ್ರಮವಾಗಿ ಮಾಡಿಸಿಕೊಂಡರೂ ಸ್ವಾಧೀನಾನುಭವನ್ನು ಹೊಂದಲು ನಾನು ಅಡ್ಡಿಯಾಗಬಹುದೆಂದು ನನ್ನನ್ನು ಜಮೀನಿಂದ ಹೊರ ಹಾಕಲು ಈ ರೀತಿ ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂದು ಹೇಳಿದರು.

ನನ್ನನ್ನು ಪೊಲೀಸರು ಬೆದರಿಸಿದಂದಿನಿಂದ ನನಗೆ ಜೀವ ಭಯ ಕಾಡಿದೆ. ಆರಕ್ಷಕ ನಿರೀಕ್ಷಕರು ನನಗೆ ಬೆದರಿಸಿದಾಗ, ನಾನು ಜಮೀನುಗಳ ಸ್ವಾಧೀನಾನುಭವವನ್ನು ಹೇಮಾವತಿ ಹಾಗೂ ಅವರ ಸಂಗಡಿಗರಿಗೆ ಬಿಟ್ಟು ಕೊಡದಿದ್ದಲ್ಲಿ ನನ್ನನ್ನು ಯಾವುದಾದರೊಂದು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸುವುದಾಗಿ, ನನ್ನನ್ನು ಜೈಲಿಗೆ ಕಳುಹಿಸುವುದಾಗಿ, ನನ್ನ್ನು ಗಲ್ಲಿಗೇರಿಸಿ ಕೊಲ್ಲುವುದಾಗಿ ಬೆದರಿಸಿದ್ದರು. ಅಂದಿನಿಂದ ನನಗೆ ಮನೆಯಿಂದ ಹೊರ ಬರಲೂ ಹೆದರಿಕೆಯಾಗಿದೆ ಎಂದರು.ಹೇಮಾವತಿಗೆ ಜಮೀನುಗಳನ್ನು ಮಾರಿಕೊಂಡು ಪರಾರಿಯಾಗಲು ಹವಣಿಸಿದ್ದಾರೆ. ಅವರ ಬಳಿ ಜಮೀನುಗಳ ದಾಖಲೆಗಳಿದ್ದರೂ ಸ್ವಾಧೀನಾನುಭವವಿಲ್ಲ. ನನ್ನನ್ನು ಜಮೀನಿನಿಂದ ಒಕ್ಕಲೆಬ್ಬಿಸಿ ಆನಂತರ ಮಾರಿಕೊಳ್ಳಲು ಯೋಚಿಸಿದ್ದಾರೆ. ಇದಕ್ಕೆ ಪೊಲೀಸರು ಅವರಿಗೆ ಸಾಥ್ ಕೊಡುತ್ತಿದ್ದಾರೆ ಎಂದು ದೂರಿದರು.

ಹೇಮಾವತಿ ಬಳಿ ಅಕ್ರಮವಾಗಿ ಹೊಂದಿದ ದಾಖಲೆಗಳಿವೆ. ಅವನ್ನು ನಾನು ಈಗಾಗಲೇ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇನೆ. ದಾಖಲೆ ಇರುವವರದ್ದು ಜಮೀನೋ ಅಥವಾ ಸ್ವಾಧೀನಾನುಭವದಲ್ಲಿರುವವದ್ದೋ ಎಂದು ನ್ಯಾಯಾಲಯ ತೀರ್ಮಾನಿಸುತ್ತದೆ. ಇನ್ನೂ ನ್ಯಾಯಾಲಯದ ತೀರ್ಪು ಬಂದಿಲ್ಲ. ಆದರೆ ಈಗಲೇ ನನ್ನನ್ನು ಪೊಲೀಸರು ಬೆದರಿಸಿ ಹೊರ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ಚಿಕ್ಕಪೂವ್ವಪ್ಪ ಮರಣಿಸಿದ ನಂತರ ಹೇಮಾವತಿ ತಮ್ಮ ಹೆಸರಿಗೆ ಖಾತೆ ಮಾಡಿಕೊಂಡಿದ್ದಲ್ಲಿ ಒಂದರ್ಥವಿತ್ತು. ಆದರೆ ಸುಮಾರು ವರ್ಷ ಕಾಲ ಹವಣಿಸಿ ನಂತರ ಜಮೀನುಗಳನ್ನು ಲಪಟಾಯಿಸಲು ಈ ರೀತಿಯಾಗಿ ಪೊಲೀಸರನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಆದ್ದರಿಂದ ಪೊಲೀಸರನ್ನೂ ಒಳಗೊಂಡಂತೆ ಇವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು. ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳದಲ್ಲಿದ್ದ ಕೋಲಾರ ಜಿಲ್ಲಾ ಆರಕ್ಷಕ ಅಧೀಕ್ಷಕರಿಗೆ ದೂರನ್ನು ವರ್ಗಾಯಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

By suddi9

Leave a Reply

Your email address will not be published. Required fields are marked *