ಬಂಟ್ವಾಳ : ಮೊಡಕಾಂಪು ಇನ್ ಪ್ಯಾಂಟ್ ಜೇಸಿಸ್ ಚರ್ಚ್ ಮಾತೆ ಮರಿಯಮ್ಮನವರ ಹುಟ್ಟು ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮಾತೆ ಮರಿಯಮ್ಮನವರಿಗೆ ಸಮರ್ಪಿತ ಗ್ರೊಟ್ಟೊದಲ್ಲಿ ಎಲ್ಲಾ ಭಕ್ತಾದಿಗಳು ಹೂಗಳನ್ನು ಅರ್ಪಿಸುವ ಮುಖಾಂತರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಎಲ್ಲಾ ಕ್ರೈಸ್ತ ಭಕ್ತಾದಿಗಳು ಕುಟುಂಬ ಸಮೇತ ಚರ್ಚ್ ಗೆ ಆಗಮಿಸಿ ದಿವ್ಯ ಬಲಿ ಪೂಜೆಯಲ್ಲಿ ಭಾಗವಹಿಸಿ ಪರಮ ಪ್ರಸಾದವನ್ನು ಸ್ವೀಕರಿಸಿದರು.


