ಬಂಟ್ವಾಳ: ಶ್ರೀ ನಾಗರಕ್ತೇಶ್ವರಿ ಕ್ಷೇತ್ರದಲ್ಲಿ ದೈವ ಪ್ರೇರಣೆ ಯಂತೆ ನಾಗ ಮಂಡಲ ಸೇವೆ ನಡೆಯಲಿದೆ ಎಂಬುದಕ್ಕೆ ಇಂದು ನೆರೆದಿರುವ ಜನ ಸಾಗರವೇ ಸಾಕ್ಷಿ , ಪುರಾತನ ಇತಿಹಾಸ ಉಳ್ಳ ಈ ಕ್ಷೇತ್ರದಲ್ಲಿ ನಾಗ ಮಂಡಲ ಸೇವೆ ಅಭೂತ ಪೂರ್ವ ವಾಗಿ ನಡೆಯಲಿದೆ ಎಂಬುದು ಈಗಾಗಲೇ ಗೋಚರವಾಗುತ್ತಿದೆ . ಪರಿಸರದಲ್ಲಿರುವ ಕೆಲವೊಂದು ಪುರಾತನ ಕುರುಹುಗಳು ಈಗಲೂ ಕಾಣ ಸಿಗುತಿದ್ದು ಕಾರಣಿಕ ಕ್ಷೇತ್ರವಾಗಿ ಬೆಳಗಲಿದೆ .
ಈ ಮೂಲಕ ಸಮಾಜದ ವೈರುಧ್ಯಗಳು ನಾಶವಾಗಿ ಉತ್ತಮ ಸಮಾಜ ನಿರ್ಮಾಣ ವಾಗಲಿದೆ ಎಂದು ಶ್ರೀಧಾಮ ಮಾಣಿಲ ದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಗಳು ಇಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗ ಮಂಡಲ ಕ್ಕೆ ಶುಭ ಹಾರೈಸಿದರು . ಪ್ರಾಸ್ತಾವಿಕ ವಾಗಿ ಮಾತನಾಡಿದ ಅಷ್ಟ ಪವಿತ್ರ ನಾಗ ಮಂಡಲ ಸಮಿತಿಯ ಪ್ರದಾನ ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿ ಯವರು ಪುದು , ತುಂಬೆ , ಕಳ್ಳಿಗೆ , ಕೊಡ್ಮನ್ , ಮೇರಮಜಲು, ಅರ್ಕುಳ ಒಟ್ಟು ಆರು ಗ್ರಾಮ ಗಳನ್ನು ಸೇರಿಸಿಕೊಂಡು ,12 ವಲಯ ಗಳನ್ನು ರಚಿಸಲಾಗಿದೆ , ಸುಮಾರು 24 ಉಪವಲಯ ಸಭೆ ನಡೆಸಿ , ಗ್ರಾಮದ ಎಲ್ಲಾ ದೇವಸ್ಥಾನ , ದೈವಸ್ಥಾನ , ಭಜನಾ ಮಂದಿರ , ಯುವಕ ಮಂಡಲ , ಮಹಿಳಾ ಮಂಡಲ ಗಳನ್ನೂ ಸಂಪರ್ಕಿಸಿ ಪ್ರಮುಖರನ್ನು ಸಂಚಾಲಕರಾಗಿ ಆಯ್ದು ಕೊಂಡು ಸಮಿತಿ ರಚಿಸಲಾಗಿದೆ ಎಂದರು.
ಗೌರವ ಮಾರ್ಗದರ್ಶಕರಾಗಿ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಗೌರವಾಧ್ಯಕ್ಷರಾಗಿ ಐತಪ್ಪ ಆಳ್ವ ಸುಜೀರುಗುತ್ತು , ಅಧ್ಯಕ್ಷರಾಗಿ ಪ್ರಕಾಶ್ಚಂದ್ರ ರೈ ದೇವಸ್ಯ , ಕಾರ್ಯಾಧ್ಯಕ್ಷರಾಗಿ ಚಂದ್ರಹಾಸ್ ಶೆಟ್ಟಿ ರಂಗೋಲಿ , ಪ್ರದಾನ ಸಂಚಾಲಕರಾಗಿ ತೇವು ತಾರಾನಾಥ ಕೊಟ್ಟಾರಿ, ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ ಗೌರವ ಸಲಹೆಗಾರರಾಗಿ ವಜ್ರನಾಭ ಶೆಟ್ಟಿ ಅರ್ಕುಳ ಬೀಡು , ರಾಮಕೃಷ್ಣ ಚೌಟ ಸುಜೀರ್ ಗುತ್ತು , ಜಿ ಜಿ ಮೋಹನದಾಸ್ ಪ್ರಭು , ಸದಾನಂದ ಆಳ್ವ ಕಂಪ , ಜಗನ್ನಾಥ್ ಚೌಟ , ರಾಜಶೇಖರ್ ರೈ ಕಲ್ಲಿಗೆ , ಜಯರಾಮ್ ಸಾಮಾನಿ ತುಂಬೆ ,
, ಅರುಣ್ ಆಳ್ವ ತುಂಬೆ ಗುತ್ತು , ಭಾಸ್ಕರ ಚೌಟ ಕುಂಭ್ಡೇಲ್ , ಪ್ರಕಾಶ್ ಶೆಟ್ಟಿ ತುಂಬೆ, ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ , ವಿವೇಕ್ ಆಳ್ವ ಕೊಡ್ಮಾಣ್ , , ರಾಮದಾಸ್ ಕೋಟ್ಯಾನ್ ಮಜಿ , ರಾಮಚಂದ್ರ ಬಂಗೇರ ಭಗವತಿ , ಶಿವರಾಮ ಶೆಟ್ಟಿ ತೇವು ಗುತ್ತು, ಹರೀಶ್ ಶೆಟ್ಟಿ ನಾಲದೆ , ಗಣೇಶ್ ಸುವರ್ಣ ತುಂಬೆ , ಲೋಕನಾಥ ಆಚಾರ್ಯ ದೆಕ್ಕೇದು , ಉಪಾಧ್ಯಕ್ಷರು , ಕಾರ್ಯದರ್ಶಿ, ಅಲ್ಲದೆ ಉಪಸಮಿತಿಗಳನ್ನು ರಚಿಸಿ ಸಂಚಾಲಕರು ಸದಸ್ಯರುಗಳನ್ನು ಆರಿಸಲಾಯಿತು ವೇದಿಕೆಯಲ್ಲಿ ಕ್ಷೇತ್ರದ ತಂತ್ರಿ ಗಳಾದ ಪೊಳಲಿ ಸುಬ್ರಮಣ್ಯ ತಂತ್ರಿ , ರಾಮಚರಣ್ ತಂತ್ರಿ ಕೊಡಮಣ್ಣು ಕಾಂತಪ್ಪ ಶೆಟ್ಟಿ ,
ಐತಪ್ಪ ಆಳ್ವ ಸುಜೀರುಗುತ್ತು , ಪ್ರಕಾಶ್ಚಂದ್ರ ರೈ ದೇವಸ್ಯಸದಾನಂದ ಆಳ್ವ ಕಂಪ, ವಜ್ರನಾಭ ಶೆಟ್ಟಿ ಅರ್ಕುಳ ಬೀಡು, ಭಾಸ್ಕರ ಚೌಟ ಕುಂಭ್ಡೇಲ್, ವಿವೇಕ್ ಆಳ್ವ ಕೊಡ್ಮಾಣ್, ರಾಮಚಂದ್ರ ಬಂಗೇರ ಭಗವತಿ, ರವೀಂದ್ರ ಕಂಬಳಿ , ಶಶಿರಾಜ್ ಶೆಟ್ಟಿ ಕೊಳಂಬೆ , ಜಿ ಜಿ ಮೋಹನದಾಸ್ ಪ್ರಭು, ಚಂದ್ರಶೇಖರ ಗಾಂಭೀರ ಸುಜೀರ್ ಗುತ್ತು , ಅರುಣಕುಮಾರ್ ಶೆಟ್ಟಿ ನುಲಿಯಾಳ್ ಗುತ್ತು , ಪೂವಪ್ಪ ಬಂಗೇರ ನಾಣ್ಯ , ಸುಬ್ರಮಣ್ಯ ರಾವ್ , ಮತ್ತಿತರರಿದ್ದರು.

