ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾತಬೆಟ್ಟು ಗ್ರಾಮದ ಬೆಂಚಿನಡುಕ ಎಂಬಲ್ಲಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಪಿಲಾತಬೆಟ್ಟುಗ್ರಾಮದ ಬೆಂಚಿನಡುಕ ನಿವಾಸಿ  ಏಂಜಲಿನ್ ಮಸ್ಕರೇನಸ್ ಅವರ ಮನೆಯಲ್ಲಿ   ಈ ಕಳವು ಕೃತ್ಯ ನಡೆದಿದೆ.
ಏಂಜಲಿನ್ ಅವರು ಆ.24 ರ ಸಂಜೆ 5 ಗಂಟೆಗೆ ಮನೆಗೆ ಬೀಗ ಹಾಕಿ ಸಂಬಂಧಿಕರಲ್ಲಿ ತೆರಳಿದ್ದು, ಸೆ.10 ರಂದು ಸಂಜೆ 5.00 ಗಂಟೆಗೆ ಮನೆಗೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಮನೆಗೆ  ಬೀಗ ಹಾಕಿದ ಬಳಿಕ  ಕೀಯನ್ನು  ಮನೆಯ ಸಿಟ್ ಔಟ್ ನಲ್ಲಿದ್ದ ಹೂಕುಂಡದಲ್ಲಿರಿಸಿ ತೆರಳಿದ್ದರು.ಕಳ್ಳರು ಹೂಕುಂಡದಲ್ಲಿಟ್ಟಿದ್ದ ಕೀಯಿಂದ ಮನೆಯ ಬಾಗಿಲನ್ನು ತೆರೆದು ಮನೆಯೊಳಗೆ ಪ್ರವೇಶಿಸಿ  ಬೆಡ್ ರೂಮ್ ನಲ್ಲಿದ್ದ ಗೋದ್ರೆಜ್  ಕಪಾಟಿನಿಂದ ಸುಮಾರು 30 ಗ್ರಾಂ ತೂಕದ ಎರಡೆಳೆಯ ಚಿನ್ನದ ಕರಿಮಣಿ ಸರ ಸುಮಾರು11 ಗ್ರಾಂ ತೂಕದ ನೆಕ್ಲೇಸ್ ಮತ್ತು ಸುಮಾರು2 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ ಏಂಜಲಿನ್ ಅವರ ಅತ್ತೆಯ ಬೆಡ್ರೂಮ್ ನ ಕಪಾಟಿನಲ್ಲಿದ್ದ ಸುಮಾರು 8 ಗ್ರಾಂ ತೂಕದ ಒಂದು ಜೊತೆ ಬೆಂಡೋಲೆಯನ್ನು ಕಳವುಗೈದು ಪರಾರಿಯಾಗಿದ್ದಾರೆ.
ಕಳುವಾದ ಚಿನ್ನಾಭರಣದ ಮೌಲ್ಯ 1,50 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ ಐ ಸೌಮ್ಯ ಮತ್ತವರ ಸಿಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.ಬಳಿಕ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *