ಕೋಲಾರ: ಗ್ರಾಮೀಣ ಪ್ರದೇಶದಲ್ಲಿ ವಾತಾವರಣದ ಏರುಪೇರಿನಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಮುನ್ನೆಚ್ಚರಿಕೆಯಾಗಿ ಹಳ್ಳಿಗಳಲ್ಲಿ ಸಂಚಾರಿ ಆರೋಗ್ಯ ವಾಹನದ ಮೂಲಕ ಚಿಕಿತ್ಸೆ ಮತ್ತು ಜಾಗೃತಿ ಮೂಡಿಸಿ ಸಾಂಕ್ರಾಮಿಕ ರೋಗಗಳಿಗೆ ಸೂಕ್ತ ಚಿಕಿತ್ಸೆಯನ್ನು ಎಲ್ಲಾ ಹೋಬಳಿ ಆರೋಗ್ಯ ಕೇಂದ್ರಗಳಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಬೇಕೆಂದು ರೈತ ಸಂಘದಿಂದ ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ|| ವಿಜಯ್‍ಕುಮಾರ್‍ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಜಿಲ್ಲೆಯಲ್ಲಿ ವಾತಾವರಣದ ಏರುಪೇರು ಹಾಗೂ ಒಣ ದೂಳಿನ ಗಾಳಿಗೆ ಮತ್ತು ಕಲುಷಿತ ನೀರುಗಳಿಂದ ಹಳ್ಳಿಗಳಲ್ಲಿ ಅಲ್ಲಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು ಜನರು ತತ್ತರಿಸುತ್ತಿದ್ದಾರೆ.ಅದರಲ್ಲೂ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ನೈರ್ಮಲ್ಯವಿಲ್ಲದ ಚರಂಡಿಗಳಿಂದ ಸೊಳ್ಳೆಮತ್ತು ವೈರಸ್ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್‍ಗುನ್ಯ, ಎಚ್,1ಎನ್,1 ಕಾಲಾರ, ಟೈಪಾಹಿಡ್, ವೈರಲ್ ಪ್ಯೂವರ್, ಹೆಚ್ಚಾಗಿ ಹರಡಿ ಬಡಕೂಲಿಕಾರ್ಮಿಕರ ಜೀವಗಳನ್ನು ಸರಿಯಾಗಿ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಮತ್ತು ಖಾಸಗಿ ನರ್ಸಿಂಗ್ ಹೋಂಗಳ ಹಣದಾಹಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಪರಿತಪಿಸುತ್ತಿದ್ದಾರೆಂದು ಆರೋಪಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಗ್ರಾಮೀಣ ಪ್ರದೇಶದ ಜನ ವೈರಲ್ ಜ್ವರ ಮತ್ತಿತರ ಜ್ವರಗಳಿಂದ ತತ್ತರಿಸುತ್ತಿದ್ದರೂ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಣವಿಲ್ಲದೆ ಬಡರೋಗಿಗಳಿಗೆ ಒಳಗಡೆ ಪ್ರವೇಶವೂ ಸಹ ಇಲ್ಲ ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ರಕ್ತ ಪರೀಕ್ಷೆ ಹಾಗೂ ಮತ್ತಿತ್ತರ ಪರೀಕ್ಷೆಗಳ ನೆಪದಲ್ಲಿ ಬಡರೋಗಿಗಳನ್ನು ವೈದ್ಯರು ಹಗಲು ದರೋಡೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರಿ ಹೋಬಳಿ ಪ್ರಾಥಮಿಕ ಕೇಂದ್ರಗಳ ಸಿಬ್ಬಂದಿ ಸರ್ಕಾರ ಸಂಬಳ ಪಡೆಯಲು ಮಾತ್ರ ಇದ್ದಾರೆಯೇ ಹೊರತು ಯಾವುದೇ ರೋಗಿಗಳಿಗೆ ಚಿಕಿತ್ಸೆ ಕೊಡದೆ ಮೊಬೈಲ್‍ನಲ್ಲಿ ವಾಟ್ಸಾಪ್ ಪೇಸ್‍ಬುಕ್‍ಗಳಲ್ಲಿ ಬ್ಯೂಸಿಯಾಗಿರುತ್ತಾರೆ.ಈಗಾಗಲೆ ಬರದಿಂದ ತತ್ತರಿಸಿ ಜ್ವರಗಳಿಂದ ನರಳುತ್ತಿರುವ ಜನ ಸಾಮಾನ್ಯರ ಹಿತ ಕಾಯಲು ಮಾನ್ಯರು ಕೂಡಲೇ ಎಲ್ಲಾ ಪ್ರಾಥಮಿಕ ಆರೋಗ್ಯಾಧಿಕಾರಿಗಳು ಮತ್ತು ಪಂಚಾಯತ್ ಅದಿಕಾರಿಗಳಿಗೆ ಆದೇಶಿಸಿ ಹಳ್ಳಿಗಳಲ್ಲಿ ಸ್ಚಚ್ಚತೆ ಮತ್ತು ಬ್ಲೀಚಿಂಗ್ ಸಿಂಪಡಿಸುವಂತೆ ಸೂಚಿಸಬೇಕು.ಮತ್ತು ಪ್ರತಿ ಪಂಚಾಯತಿಯಲ್ಲೂ ಸಂಚಾರಿ ವಾಹನದ ಆರೋಗ್ಯ ವ್ಯವಸ್ಥೆ ಮಾಡಿ ಹಳ್ಳಿಗಾಡಿನ ಜನರಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ|| ವಿಜಯ್‍ಕುಮಾರ್‍ರವರು ವಾತವರಣದ ಏರುಪೇರಿನಿಂದ ಗ್ರಾಮೀಣ ಪ್ರದೇಶಗಳಲ್ಲಿ ವೈರಲ್ ಜ್ವರದ ಜೊತೆಗೆ ಮತ್ತಿತರ ಜ್ವರಗಳು ಕಾಣಿಸಿಕೊಳ್ಳುತ್ತಿದ್ದು, ಇದರ ಬಗ್ಗೆ ಕರಪತ್ರದ ಮುಖಾಂತರ ಜಾಗೃತಿ ಮೂಡಿಸಲು ಸಂಬಂಧಪಟ್ಟ ವೈದ್ಯರಿಗೆ ಆದೇಶ ಮಾಡಲಾಗಿದೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನಿರ್ಲಕ್ಷೆ ಮಾಡದೇ ಸೂಕ್ತವಾದ ಚಿಕಿತ್ಸೆ ನೀಡುವ ಜೊತೆಗೆ ಅಗತ್ಯವಿರುವ ಔಷಧಿಗಳನ್ನು ನೀಡುವಂತೆ ಸೂಚಿಸಲಾಗಿದೆ. ಸಮರ್ಪಕವಾದ ಚಿಕಿತ್ಸೆ ನೀಡದೆ ನಿರ್ಲಕ್ಷೆ ಮಾಡಿದರೆ ಅಂತಹರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾ ಸಂಚಾಲಕ ಕೆ,ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಮಂಗಸಂದ್ರ ನಾಗೇಶ್, ವೆಂಕಟೇಶಪ್ಪ, ತಿಮ್ಮಣ್ಣ, ರಂಜಿತ್, ಈಕಂಬಳ್ಳಿ ಮಂಜುನಾಥ್, ಮುದುವಾಡಿ ಚಂದ್ರಪ್ಪ, ನಲ್ಲಾಂಡಹಳ್ಳಿ ಶಂಕರ್, ಪುರುಷೋತ್ತಮ್, ಮತ್ತಿತರಿದ್ದರು.