ಬಂಟ್ವಾಳ: ಅಕ್ರಮ ಮರಳು ಸಾಗಾಟವನ್ನು ಪತ್ತೆ ಹಚ್ಚಿರುವ. ಬಂಟ್ವಾಳ ತಹಶೀಲ್ದಾರ್ ತಶ್ಮಿ ಎಸ್.ಎರ್. ಲಾರಿಗಳ ವಿರುದ್ದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ನೇತ್ರತ್ವದ ತಂಡ ಈ ಸಂಬಂಧ ಮರಳು ತುಂಬಿದ ಐದು ಲಾರಿಗಳನ್ನು ವಶಪಡಿಸಿ ಬಂಟ್ವಾಳ ಪೊಲೀಸರಿಗೆ ಹಸ್ತಾಂತರಿಸಿದ್ದರೆ. ರಾತ್ರಿ ಗಸ್ತಿನಲ್ಲಿದ್ದ ತಹಶೀಲ್ದಾರ್ ಮತ್ತವರ ಸಿಬಂದಿಗಳು ಶನಿವಾರ ನುಸುಕಿನ ಜಾವನಡೆಸಿದ ಕಾರ್ಯಾಚರಣೆಯಲ್ಲಿ ವಿವಿದೆಡೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮರಳುತುಂಬಿದ ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾತ್ರಿ ವೇಳೆ ಹೊರ ಜಿಲ್ಲೆಗಳಿಗೆ ದುಪ್ಪಟ್ಟು ಹಣಕ್ಕೆ ಅಕ್ರಮವಾಗಿ ಮರಳು ಸಾಗಾಟವಾಗುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನಯ ಕಾರ್ಯಾಚರಣೆಗೆ ಮುಂದಾದ ತಹಶೀಲ್ದಾರ್ ರಶ್ಮಿ ಅವರು, ಪಾಣೆಮಂಗಳೂರಿನ ನರಹರಿ ಬಳಿ ಎರಡು , ಮಾರ್ನಬೈಲ್ , ಚೇಲೂರು,ವಿಟ್ಲದ ಪಡಿಬಾಗಿಲು ಎಂಬಲ್ಲಿ ತಲಾ ಒಂದು ಲಾರಿಯನ್ನು ವಶಕ್ಕೆ ಪಡಿಸಿ ಅಕ್ರಮ ಮರಳು ಸಾಗಾಟದ ಲಾರಿ ಚಾಲಕರಿಗೆ ಮುಂಜಾನೆಯೇ ಬಿಸಿಮುಟ್ಟಿಸಿದ್ದಾರೆ.ವಶಕ್ಕೆ ಪಡೆದುಕೊಂಡ ಲಾರಿಗಳನ್ನು ಬಂಟ್ವಾಳ ನಗರ ಮತ್ತು ವಿಟ್ಲ ಪೋಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ.ಕಂದಾಯ ನಿರೀಕ್ಷಕ ನವೀನ್ ಹಾಗೂ ಇಲಾಖೆಯ ಸಿಬ್ಬಂದಿ ಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.