ಬಂಟ್ವಾಳ: ಪುರಸಭೆಯು ಸ್ವಯಂಘೋಷಿತ ಆಸ್ತಿ ತೆರಿಗೆಯ ಜೊತೆ  ಕಸ ನಿರ್ವಹಣಾ ಶುಲ್ಲವನ್ನು ಮುಂಗಡವಾಗಿ ವಸೂಲಿ ಮಾಡುವ ಕ್ರಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕು ಸಮಾನಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ಬಂಟ್ವಾಳ ಪುರಸಭಾ ಕಚೇರಿ ಮುಂಭಾಗ ಮಂಗಳವಾರ ನಡೆಯಿತು.ಇದಕ್ಕು ಮೊದಲು  ರಥಬೀದಿಯಲ್ಲಿರುವ ಸ್ವರ್ಣ ಸೌಧದ ಮುಂಭಾಗದಲ್ಲಿ ಪುರವಾಸಿಗಳು,ವರ್ತಕರು ಸಭೆ ಸೇರಿ ಅಲ್ಲಿಂದ ಮೆರವಣಿಗೆ ಮೂಲಕ ಪುರಸಭಾಡಳಿತಕ್ಕೆ ದಿಕ್ಕಾರ ಕೂಗುತ್ತಾ ಪುರಸಭಾಕಚೇರಿಯವರೆಗೆ ಸಾಗಿ ಬಂದು ಧರಣಿ ಕುಳಿತರು.    ತೆರಿಗೆಯ ಜೊತೆ ಕಸ ಸಂಗ್ರಹದ ಶುಲ್ಕ ವಸೂಲಿ ಮಾಡುವ ಪುರಸಭೆಯ  ಜನವಿರೋಧಿ ನೀತಿಯನ್ನು  ಪ್ರತಿಭಟನಾಕಾರರು ಈ ಸಂದರ್ಭ ಖಂಡಿಸಿದರಲ್ಲದೆ ಖುದ್ದು ಜಿಲ್ಲಾಧಿಕಾರಿಯವರೇ ಅಗಮಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಪಟ್ಟುಹಿಡಿದರು. ಈ ವಿಚಾರದಲ್ಲಿ ಜಿಲ್ಲಾಧಿಕಾರಿಯವರು ಸ್ಪಂದಿಸದಿದ್ದರೆ ಅಮರಣಾಂತ ಉಪವಾಸ ನಡೆಸಲಾಗುವುದು ಎಂದು ಎಚ್ಚರಿಸಿದರು.
IMG-20190917-WA0261
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಚುನಾಯಿತ ಪ್ರತಿನಿಧಿ ಆಡಳಿತ ಇಲ್ಲದಿದ್ದಾಗ ತೆರಿಗೆಯ ಜೊತೆಯಲ್ಲಿ ಕಸ ನಿರ್ವಹಣೆಯ ಶುಲ್ಕವನ್ನು ಮುಂಗಡವಾಗಿ ವಸೂಲಿ ಮಾಡುವುದು ಸರಿಯಲ್ಲ,  ಜಿಲ್ಲಾಧಿಕಾರಿಯವರು ಈ ಬಗ್ಗೆ ಪುನರ್ ಪರಿಶೀಲಿಸಿ ಇಂತಹ ಜನವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಪುರಸಭಾ ಸದಸ್ಯರಾದ ವಾಸುಪೂಜಾರಿ,ಮೊನೀಶ ಆಲಿ,ಗಂಗಾಧರ ಪೂಜಾರಿ,ಜನಾರ್ಧನ ಚಂಡ್ತಿಮಾರ್ , ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸಮನ್ವಯ ಸಮಿತಿ ಮುಖಂಡರಾದ ರಾಮಣ್ಣ ವಿಟ್ಲ,ಬಿ.ಶೇಖರ,ಮಾಜಿ ಸದಸ್ಯರಾದ ಬಿ.ಮೋಹನ್, ಸದಾಶಿವ ಬಂಗೇರ,ವಿಠಲ ಬಂಗೇರ,ಮುತ್ತಪ್ಪ ಪೂಜಾರಿ ಮೊದಲಾದವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.
IMG-20190917-WA0882
ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಪುರಸಭಾ ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ಲೋಲಾಕ್ಷ,ಸಿದ್ದಿಕ್ ಗುಡ್ಡೆಯಂಗಡಿ,  ಹಸೈನಾರ್,  ಜೆಸಿಂತಾ, ಶ್ರೀಧರ ಅಮೀನ್, ಜಗದೀಶ್ ಕುಂದರ್ , ಸಾದಿಕ್,   ಚಂದ್ರಶೇಖರಪೂಜಾರಿ,ವೆಂಕಪ್ಪಪೂಜಾರಿ, ಜಗನ್ನಾಥ.ಬಿ.ಮೊದಲಾದವರಿದ್ದರು. ಸಮಿತಿ ಸಂಚಾಲಕ ಪ್ರಭಾಕರ ದೈವಗುಡ್ಡೆ ಸ್ವಾಗತಿಸಿದರು. ಸುರೇಶ್ ನಿರೂಪಿಸಿದರು.
DSC_0914
ಪ್ರತಿಭಟನೆ ವಾಪಾಸ್….  ಸಂಜೆಯ ವೇಳೆಗೆ ಪುರಸಭೆಯ ಆಡಳಿತಾಧಿಕಾರಿಯು ಆದ,ಮಂಗಳೂರು ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಅವರು ಅಗಮಿಸಿ ತ್ಯಾಜ್ಯ ಸಂಗ್ರಹದ ವಾಹನ ಹೋಗದಂತ ಪ್ರದೇಶದ ನಾಗರಿಕರಿಂದ ತೆರಿಗೆಯ ಜತೆ ಕಸ ಸಂಗ್ರಹದ ಅಡ್ವಾನ್ಸ್ ಶುಲ್ಕ ವಸೂಲಿ ಮಾಡುವುದನ್ನು ತಕ್ಷಣಕ್ಕೆ ನಿಲ್ಲಿಸಲಾಗುವುದು ಎಂದು ನೀಡಿದ ಭರವಸೆಯ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈ ಬಿಟ್ಟರು.

By suddi9

Leave a Reply

Your email address will not be published. Required fields are marked *