ವಿಟ್ಲ : ರೋಟರಿ ಕ್ಲಬ್ ವಿಟ್ಲದ ವತಿಯಿಂದ ಜೀವನ್ ಸಂಧ್ಯಾ ಎಂಬ ವಿಚಾರದಲ್ಲಿ ಉಪನ್ಯಾಸ ಹಮ್ಮಿಕೊಳ್ಳಲಾಯಿತು .ಡಾ.ವಿ. ಕೆ .ಹೆಗ್ಡೆಯವರು ವಿಠಲ ಹೈಸ್ಕೂಲಿನ ಇಂಟರಾಕ್ಟ್ ಕ್ಲಬ್ ನ ಸದಸ್ಯರಿಗೆ ಜೀವನ್ ಸಂಧ್ಯಾ ಎಂಬ ವಿಷಯದಲ್ಲಿ ಮಾತನಾಡುತ್ತ, ವಿದ್ಯಾರ್ಥಿಗಳಿಗೆ ಜೀವನದ ಸಂಧ್ಯಾ ಕಾ ಲದಲ್ಲಿರುವ ಹಿರಿಯರಿಗೆ ನೆರವು ನೀಡುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು .

ಸಭೆಯ ಅಧ್ಯಕ್ಷತೆಯನ್ನು ರೋ ಜಯರಾಮ್ ರೈ ವಹಿಸಿದ್ದರು.ಡಾ ಚರಣ್ ಕಜೆ ಸಂಜೀವ ಎಂ ಎಸ್ ಭಾಸ್ಕರ್ ಶೆಟ್ಟಿ, ವಸಂತ್ ಶೆಟ್ಟಿ. ಪಿ ಕೆ ಶೆಟ್ಟಿ ಮಂಜುನಾಥ ಶೆಟ್ಟಿ ಪ್ರಕಾಶ್ ನಾಯಕ್, ಅಶ್ರಫ್,ಉಪಸ್ಥಿತರಿದ್ದರು
ಉಪಪ್ರಾಂಶುಪಾಲ ಕಿರಣ್ ಕುಮಾರ್ ಸ್ವಾಗತಿಸಿದರು,ಅಣ್ಣಪ್ಪ ಸಾಸ್ತಾನ ವಂದಿಸಿದರು, ರಮೇಶ್ ಬಿ. ಕೆ. ನಿರೂಪಿಸಿದರು