ಕೋಲಾರ : ಬಯಲು ಸೀಮೆಯ ಗಡಿಭಾಗದಕೋಲಾರ ಜಿಲ್ಲೆಗೆ ಹಿಂದಿನ ಸರ್ಕಾರ ಅಭಿವೃದ್ಧಿಗೆ ನೀಡಿದ ಅನುದಾನಗಳನ್ನು ರದ್ದುಮಾಡಿರುವ ಬಿ.ಜೆ.ಪಿ. ಸರ್ಕಾರದ ವಿರುದ್ಧ ಭಾನುವಾರ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಘೇರಾವ್ ಹಾಕಲು ರೈತರ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷಕೆ.ನಾರಾಯಣಗೌಡ ಗ್ರಾಮೀಣ ಪ್ರದೇಶಗಳಲ್ಲಿ  ಚಾಲ್ತಿರುವ ಹಳೆಯ ಗಾದೆ ರೆಡ್ಡೋಚ್ಚ ಮೊದಲ್ತಕೋ ಎಂಬಂತೆ ಸರ್ಕಾರಗಳು ಜನ ಸಾಮಾನ್ಯರ ಜೀವನದ ಜೊತೆ ಹಾಗೂ ಜಿಲ್ಲೆಯ ಅಭಿವೃದ್ಧಿಯ ಜೊತೆ ಚಲ್ಲಾಟವಾಡುತ್ತಿದ್ದಾರೆ.

ಹಿಂದಿನ ಮುಖ್ಯ ಮಂತ್ರಿಕುಮಾರಸ್ವಾಮಿರವರು ಗಡಿಭಾಗದ ಕೋಲಾರಜಿಲ್ಲೆಯ ಅಭಿವೃದ್ಧಿಗೆ ನೀಡಿದ್ದ ಸಾವಿರಾರು ಕೋಟಿಅನುದಾನಗಳು ಹಣಕಾಸು ಇಲಾಖೆಯಿಂದ ಅನುಮೋದನೆಇಲ್ಲದೆ ಬಿಡುಗಡೆಗೊಳ್ಳದೆ ಕಾಮಗಾರಿಗಳುಪ್ರಾರಂಭಗೊಳ್ಳಲಿಲ್ಲ. ಆದರೆ ಸರ್ಕಾರಗಳಹಗ್ಗಾಜಗ್ಗಾಟದಲ್ಲಿ ಕುದುರೆ ವ್ಯಾಪಾರದ ಮುಖಾಂತರರಾಜ್ಯದ ಚುಕ್ಕಾಣಿ ಹಿಡಿದಿರುವ ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆಬಂದ ಪ್ರಾರಂಭದಲ್ಲೇ ಮುಖ್ಯ ಮಂತ್ರಿ ಯಡಿಯೂರಪ್ಪನವರು ಬಯಲು ಸೀಮೆ ಬರಪೀಡಿದಕೋಲಾರ ಜಿಲ್ಲೆಯ ಅಭಿವೃದ್ಧಿಗೆ ನೀಡಿದ್ದ ಎಲ್ಲಾಅನುದಾನಗಳನ್ನು ಸಂಪೂರ್ಣವಾಗಿ ರದ್ದುಪಡಿಸಿ ಆದೇಶಮಾಡಿರುವುದು ಬಯಲು ಸೀಮೆಯ ಜನತೆಗೆ ಮಾಡಿದ ದ್ರೋಹವಾಗಿದೆ ಎಂದು ಸರ್ಕಾರಗಳ ವಿರುದ್ದಆಕ್ರೋಷ ವ್ಯಕ್ತಪಡಿಸಿದರು.

Raitha sangha cm gerav news 19-09-2019 (2)

ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿಮೂರು ಪಕ್ಷದ ರಾಜಕಾರಣಿಗಳಿಗೆ ಅಧಿಕಾರಹಿಡಿಯಲು ಬಯಲು ಸೀಮೆಯ ಕೋಲಾರ ಜಿಲ್ಲೆಯಮೂಡಲಬಾಗಿಲು ಮುಳಬಾಗಿಲಿನ ಕುರುಡುಮಲೆಗಣೇಶ ದೇವರ ಆಶೀರ್ವಾದ ಬೇಕು ಆದರೆ ಜಿಲ್ಲೆಯಅಭಿವೃದ್ದಿಯ ಕಡೆ ಗಮನ ಕೊಡಲು ಯಾವುದೇಸರ್ಕಾರಕ್ಕೆ ಹಾಗು ಸ್ಥಳೀಯ ಜನ ಪ್ರತಿನಿಧಿಗಳಿಗೆಇಚ್ಚಾಸಕ್ತಿ ಇಲ್ಲ. ಈಗಾಗಲೇ ಮಳೆ ಇಲ್ಲದೆ 14ವರ್ಷಗಳಿಂದ ಬೀಕರವಾದ ಬರಗಾಲಕ್ಕೆ ತುತ್ತಾಗಿರೇಷ್ಮೆ, ಹಾಲು, ಟೆಮೋಟೋ ಮತ್ತಿತರ ಬೆಲೆ ಕುಸಿತದಿಂದ ಕಂಗಾಲಾಗಿ ಕೃಷಿಯಿಂದ ವಿಮುಕ್ತಿಹೊಂದು ಆತ್ಮಹತ್ಯೆ ಯತ್ತ ಮುಖಮಾಡುವ ರೈತಕುಲವನ್ನು ಉಳಿಸಲು ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಮತ್ತೊಂದಡೆ ಜಿಲ್ಲೆಯ ನೀರಾವರಿ ರಸ್ತೆ, ಕೃಷಿ , ತೋಟಗಾರಿಕೆ. ರೇಷ್ಮೆ ಮತ್ತಿರ ಇಲಾಖೆಗಳಿಗೆ ಬಿಡುಗಡೆಯಾಗಿದ್ದ ಅಭಿವೃದ್ಧಿಯ ಅನುದಾನಗಳನ್ನು ರದ್ದುಗೊಳಿಸಿರುವ ಕೋಲಾರ ಜಿಲ್ಲಾ ವಿರೋದಿ ಬಿ.ಜೆ.ಪಿ. ಸರ್ಕಾರದ ವಿರುದ್ಧ ದಿನಾಂಕ 22-09-2019ರ ರ ಭಾನುವಾರ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಘೇರಾವ್ ಹಾಕಲು ರೈತರ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಹ.ಸೇ.ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ತಾ.ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಕೆ.ಜಿ.ಎಫ್ ತಾ.ಅಧ್ಯಕ್ಷ ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾತ, ಮು.ತಾ.ಅಧ್ಯಕ್ಷ ಫಾರುಕ್‍ಪಾಷ, ಯಲುವಳ್ಳಿ ಪ್ರಭಾಕರ್, ಶ್ರೀನಿವಾಸಪುರ ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಆಚಂಪಲ್ಲಿ ಗಂಗಾದರ್, ಮಾಲುರು ತಾಲ್ಲೂಕು ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಬಂಗಾರಪೇಟೆ ತಾ.ಅ.ಐತಂಡಹಳ್ಳಿ ಅಂಬರೀಶ್, ಉದಯ್, ಮಂಜುನಾಥ್, ಮೀಸೆ ವೆಂಕಟೇಶಪ್ಪ, ತೆರ್ನಹಳ್ಳಿ ವೆಂಕಿ, ಸಹದೇವಣ್ಣ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಪ್ರಸನ್ನಕುಮಾರ್, ಸಂತೋಷ್, ಪುರುಶೋತ್ತಮ್, ಮುದುವಾಡಿ ಚಂದ್ರಪ್ಪ ಇದರು .

By suddi9

Leave a Reply

Your email address will not be published. Required fields are marked *