ಕೋಲಾರ: ಕೆಜಿಎಫ್ ದಿನನಿತ್ಯದ ಕೆಲಸ ಕರ್ಯಗಳ ಒತ್ತಡದಲ್ಲಿ ಸಿಲುಕಿ ಮಾನಸಿಕ ಕಿನ್ನತೆಗೊಳಗಾಗುವ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಅಫತಾಬ್‍ಹುಸೇನ್ ಹೇಳಿದರು. ಮುಸ್ಮಾನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೇತಮಂಗಲದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ, ವ್ಯಾಯಾಮ ಯೋಗ ಮುಂತಾದುವುಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಕಾಯಿಲೆಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಾಯಿತು ಹಾಗೂ ಮೆಡಿಸೇವ್ ಹೇಲ್ತ್ ಕಾರ್ಡ್‍ಗಳನ್ನು ವಿತರಿಸಲಾಯಿತು.ಉಚಿತ ಆರೋಗ್ಯ ಶಿಬಿರದಲ್ಲಿ ಬೇತಮಂಗಲ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್‍ನ ಮುಖಂಡರಾದ ಅಬ್ದುಲ್ ಮನನ್, ಉಮೇಹಬೀಬಾ, ನಜೀರ್ ಮುಂತಾದವರು ಹಾಜರಿದ್ದರು.19 ಕೆಜಿಎಫ್ 01 ಬೇತಮಂಗಲ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅಫತಾಬ್‍ಹುಸೇನ್ ಮೆಡಿಸೇವ್ ಕಾರ್ಡ್ ವಿತರಿಸಿದರು.