ಬಂಟ್ವಾಳ : ಸೇವೆ ಎಂಬುದು ಬರೀ ಹೈನುಗಾರಿಕೆ ಮಾತ್ರ ವಲ್ಲ , ಪ್ರಾದೇಶಿಕ ದೇಸೀ ತಳಿಗಳನ್ನು ಉಳಿಸುವುದು ಅಷ್ಟೇ ಪ್ರಾಮುಖ್ಯವಾಗಿದೆ . ಹಲವಾರು ಪ್ರಾದೇಶಿಕ ದೇಸೀ ತಳಿಗಳ ಸಂತತಿ ಗಳು ನಾಶ ವಾಗಿದೆ ಅವುಗಳಲ್ಲಿ ಕರಾವಳಿ ಗಿಡ್ಡ , ಮಲೆನಾಡು ಗಿಡ್ಡ ತಳಿಗಳು ಉಳಿದಿವೆಯಾದರೂ ವಿನಾಶದ ಅಂಚಿನಲ್ಲಿದೆ ವಿಶೇಷ ಔಷಧೀಯ ಗುಣಗಳುಳ್ಳ ಈ ತಳಿಗಳನ್ನು ಉಳಿಸಬೇಕಾಗಿದೆ . ಅವುಗಳ ಗೋಮೂತ್ರ , ಗೋಮಯ ಗಳಿಂದ ತಯಾರಿಸ ಬಹುದಾದ ಸಾಬೂನು,ವಿಭೂತಿ , ದೂಪದ ಕಡ್ಡಿ , ಅರ್ಕ , ಸೌಂದರ್ಯ ವರ್ಧಕ ಗಳು ,ಇತ್ಯಾದಿ ತಾವೇ ತಯಾರಿಸಿ ಬಳಸುವ ಮೂಲಕ ವೂ ಗೋ ಸೇವೆ ಮಾಡಬಹುದು , ಭೂ ಸಂಪತ್ತು , ಜಲ ಸಂಪತ್ತು , ಪಶು ಸಂಪತ್ತು ಒಂದಕ್ಕೊಂದು ಪೂರಕ ವಾಗಿದೆ ಈ ನಿಟ್ಟಿನಲ್ಲಿ ಪ್ರಾದೇಶಿಕ ದೇಸೀ ಗೋ ಆಧಾರಿತ ಕೃಷಿ ಜೀವನ ವನ್ನು ರೈತರೆಲ್ಲರೂ ಅಳವಡಿಸಬೇಕು ಭವಿಷ್ಯ ದಲ್ಲಿ ರೋಗ ಮುಕ್ತ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಪುಣ್ಯ ಕೋಟಿ ಗೋಶಾಲೆ ಬಹ್ಮಾವರ ಇದರ ಮುಖ್ಯಸ್ಥರಾದ ಶ್ರೀ ಭಕ್ತಿ ಭೂಷಣ್ ಪ್ರಭೂಜಿ ಯವರು ಗ್ರಾಮ ವಿಕಾಸ ಪ್ರತಿಷ್ಠಾನ ಪುದು ಇದರ ಆಶ್ರಯದಲ್ಲಿ ನಡೆದ ದೇಸಿ ಗೋಆಧಾರಿತ ಕೃಷಿ ಬದುಕು ಮತ್ತು ಜೀವನ ಶೈಲಿ ಎಂಬ ವಿಚಾರದ ಬಗ್ಗೆ ಪುದು ಗ್ರಾಮ ದ ಕಿದೆಬೆಟ್ಟು ಪ್ರಕಾಶ್ ಮಡಿವಾಳ ರವರ ಮನೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮಾತನಾಡಿದರು .
ಯುವ ಇಂಜಿನೀಯರ್ , ಪೊಳಲಿ ಇನ್ಫ್ರಾಸ್ಟ್ರಚರ್ ಸಂಸ್ಥೆಯ ಮಾಲಕರಾದ ಅರ್ಜುನ್ ಪೂಂಜಾ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು ಗ್ರಾಮ ವಿಕಾಸ ಪ್ರತಿಷ್ಠಾನ ಪುದು ಅಧ್ಯಕ್ಷರಾದ ಧೀರಜ್ ಮಾರಿಪಳ್ಳ , ಭಾಸ್ಕರ್ ಚೌಟ ಕುಂಭ್ಡೇಲ್ , ಪ್ರಕಾಶ್ ಮಡಿವಾಳ ಮತ್ತಿತರರು ವೇದಿಕೆಯಲ್ಲಿದ್ದರು ಪುದು ಗ್ರಾಮ ದ ಸುಮಾರು 50 ಕ್ಕೂ ಹೆಚ್ಚು ರೈತರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು ಜಗದೀಶ್ ಕಡೆಗೋಳಿ ಯವರು ಕಾರ್ಯಕ್ರಮ ನಿರೂಪಿಸಿದರು
Attachments area
