ಫರಂಗಿಪೇಟೆ : ಅಷ್ಟಪವಿತ್ರ ನಾಗಮಂಡಲ ನಡೆಯಲಿರುವ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ಕ್ಕೆ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣ ಕ್ಕಾಗಿ ಬೇಡಿಕೆ ಮೇರೆಗೆ ಸಂಸದ ರ ನಿಧಿಯಿಂದ ಸುಮಾರು ೩೦ಲಕ್ಷ ರೂಪಾಯಿಗಳ ಅನುದಾನ ಒದಗಿಸಿದ್ದಾರೆ
ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಯವರು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಊರವರ ಸಹಕಾರದಿಂದ ರಸ್ತೆ ನಿರ್ಮಾಣ ತ್ವರಿತವಾಗಿ ಆಗಲಿದೆ . ನಾಗಮಂಡಲದ ಸಂದರ್ಭದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಊರವರ ಬಹು ದಿನಗಳ ಬೇಡಿಕೆಯಾಗಿತ್ತು ಎಂದರು
ಈ ಸಂದರ್ಭದಲ್ಲಿ ಬಿ ಜೆ ಪಿ ಮಂಗಳೂರು ಮಂಡಲ ದ ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಉಪಾದ್ಯಕ್ಷ ರುಗಳಾದ ಪ್ರವೀಣ್ ಶೆಟ್ಟಿ ಸುಜೀರು , ಜಯಶ್ರೀ ಕರ್ಕೇರ , ಅಷ್ಟಪವಿತ್ರ ನಾಗಮಂಡಲ ಸಮಿತಿ ಪ್ರದಾನ ಸಂಚಾಲಕರಾದ ತಾರಾನಾಥ್ ಕೊಟ್ಟಾರಿ , ಕಾರ್ಯಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ರಂಗೋಲಿ , ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ, ಕ್ಷೇತ್ರದ ಅಧ್ಯಕ್ಷರಾದ ಪೂವಪ್ಪ ಬಂಗೇರ ನಾಣ್ಯ , ಎ ಕೆ ಗಿರೀಶ್ ಶೆಟ್ಟಿ , ಉಮೇಶ್ ಶೆಟ್ಟಿ ಬರ್ಕೆ , ದಿನೇಶ್ ಶೆಟ್ಟಿ ಕೊಟ್ಟಿಂಜ , ರಾಧಾಕೃಷ್ಣ ತಂತ್ರಿ , ಉಮಾ ಚಂದ್ರ ಶೇಕರ ತೇಜ , ಜಗದೀಶ್ ಕುಂಭ್ಡೇಲು , ಲೋಕನಾಥ್ ಆಚಾರ್ಯ , ಜಗದೀಶ್ ಕಡೆಗೋಳಿ , ಜಯಂತಿ ದೇವದಾಸ , ಚಿತ್ತರಂಜನ್ ನಾಣ್ಯ ನಾಗೇಶ್ ಕಡೆಗೋಲಿ , ಭಾಸ್ಕರ್ ನಾಣ್ಯ ಮತ್ತಿತರರು ಉಪಸ್ಥಿತರಿದ್ದರು.
