ಬಂಟ್ವಾಳ: ಪೆಟ್ರೋನೆಟ್ ಎಂ,ಎಚ್,ಬಿ ಲಿಮಿಟೆಡ್ ನ ವತಿಯಿಂದ ಬಂಟ್ವಾಳ ತಾ.ನ ಪಂಜಿಕಲ್ಲು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ 2019-20 ನೇ ಸಾಲಿನ ಸಿ,ಎಸ್,ಆರ್ ಅನುದಾನದಲ್ಲಿ ತ್ಯಾಜ್ಯ ವಿಲೇವಾರಿ ವಾಹನವನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು.
ಸಂಸ್ಥೆಯ ಮ್ಯಾನೇಜರ್ ಗಳಾದ ರಾಜನ್ , ಮಹೇಶ್ ಹೆಗ್ಡೆ ಅವರು ಗ್ರಾಂ.ಪಂ ಅಧ್ಯಕ್ಷೆ ಸುಮಿತ್ರಯೋಗೀಶ್ ಕುಲಾಲ್ , ಪಂಚಾಯತ್ ಅಭಿವೃದ್ದಿ ಅಧಿಕಾರಿ ವೇದಾ ಇವರಿಗೆ ವಾಹನದ ಕೀಯನ್ನು ಹಸ್ತಾಂತರಿಸಿದರು. ಈ ಸಂದರ್ಭ ದಲ್ಲಿ ಪಂಚಾಯತ್ ನ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಸದಸ್ಯರುಗಳಾದ ಪೂವಪ್ಪ ಮೆಂಡನ್ ,ಹರೀಶ್ ಪೂಜಾರಿ,ದಯಾನಂದ ಗೌಡ,ಬಾಲಕೃಷ್ಣ ಪೂಜಾರಿ, ರೂಪಾಶ್ರೀ, ಸುಮತಿ,ಕು.ಶಶಿಕಲಾ ಹಾಗೂ ಸಿಬ್ಬಂದಿಗಳಾದ ಜಗದೀಶ್ ಗೌಡ, ವನಿತಾ,ಯಶವಂತ್ ಉಪಸ್ಥಿತರಿದ್ದರು…