ಬಂಟ್ವಾಳ: ನಾಪತ್ತೆಯಾಗಿದ್ದ ಯುವತಿಯೋರ್ವಳು ಮದುವೆಯಾಗಿ ಪತಿಯೊಂದಿಗೆ ಬಂಟ್ವಾಳ ಪೊಲೀಸ್ ಠಾಣೆಗೆ ಹಾಜರಾದ ಘಟನೆ ಬುಧವಾರ ನಡೆದಿದೆ. ಬಂಟ್ವಾಳ ತಾಲೂಕಿನ ಅಗ್ರಾರ್ ಸಮೀಪದ ಕಾಂಜೀರಕೋಡಿ ನಿವಾಸಿ, ಪ್ರಕಾಶ್ ದೇವಾಡಿಗ ಎಂಬವರ ಪುತ್ರಿ ಚೈತ್ರಾ(೧೯) ಅವರು ಬೆಳ್ತಂಗಡಿ ನಿವಾಸಿ ಪ್ರಶಾಂತ್ ಗೌಡ ಅವರ ಜೊತೆ ಮದುವೆಯಾಗಿ ಇಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಚೈತ್ರಾ ಅವರು ಅ. ೧೪ರಂದು ಬೆಳಿಗ್ಗೆ ಬಿ.ಸಿ.ರೋಡಿನ ಬ್ಯಾಗ್ ಕಂಪೆನಿಗೆ ಕೆಲಸಕ್ಕೆಂದು ತೆರಳಿದವಳು ನಾಪತ್ತೆಯಾಗಿದ್ದ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಇಂದು ಬೆಳಿಗ್ಗೆ ಚೈತ್ರಾ ಮತ್ತು ಪ್ರಶಾಂತ್, ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಬಂದು “ನಾವು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಬೆಳ್ತಂಗಡಿ ನೋಂದಣಿ ಕಚೇರಿಯಲ್ಲಿ ವಿವಾಹವಾಗಿರುವುದಾಗಿ ಪೊಲೀಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆಂದು ತಿಳಿದುಬಂದಿದೆ.
