ತಿರುವನಂತಪುರ: ಕೇರಳದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುವ ಶಿಕ್ಷಕಿಯರು ಮತ್ತು ಮಹಿಳಾ ಉದ್ಯೋಗಿಗಳಿಗೆ ಶುಭ ಸಮಾಚಾರ. ಮಟರ್ನಿಟಿ ಬೆನಿಫಿಟ್​ ಆ್ಯಕ್ಟ್​ ಪ್ರಕಾರ ಇರುವ ಸವಲತ್ತುಗಳು ಶೀಘ್ರವೇ ಈ ಉದ್ಯೋಗಿಗಳಿಗೂ ಸಿಗಲಿದೆ. ಅನುದಾನ ರಹಿತ ಶಿಕ್ಷಣ ಸಂಸ್ಥೆಗಳೂ ಸೇರಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮಹಿಳಾ ಉದ್ಯೋಗಿಗಳನ್ನು ಈ ಕಾಯ್ದೆಯ ವ್ಯಾಪ್ತಿಗೆ ತರಬೇಕು ಎಂದು ಕೇರಳ ಸರ್ಕಾರ ಆಗಸ್ಟ್​ 29ಕ್ಕೆ ನಡೆದ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡಿತ್ತು. ಇದಕ್ಕೆ ಸಂಬಂಧಿಸಿ ಕೇರಳ ಸರ್ಕಾರ ಕಳುಹಿಸಿದ್ದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ,ಅಧಿಸೂಚನೆ ಹೊರಡಿಸುವುದಾಗಿ ಭರವಸೆ ನೀಡಿದೆ.

Haryana-1

ಪರಿಣಾಮ, ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿರುವ ಸಾವಿರಾರು ಉದ್ಯೋಗಿಗಳಿಗೆ ವೇತನ ಸಹಿತ 26 ವಾರಗಳ ಮೆಟರ್ನಿಟಿ ರಜೆ ತೆಗೆದುಕೊಳ್ಳುವುದು ಸಾಧ್ಯವಾಗಲಿದೆ. ಅಲ್ಲದೆ, ಉದ್ಯೋಗದಾತರು ಸದರಿ ಉದ್ಯೋಗಿಗಳ ವೈದ್ಯಕೀಯ ವೆಚ್ಚ ಭರಿಸಲು ಸಾವಿರ ರೂಪಾಯಿ ಕೂಡ ಕೊಡಬೇಕಾಗುತ್ತದೆ.

By suddi9

Leave a Reply

Your email address will not be published. Required fields are marked *