ಕೋಲಾರ:ಕಳೆದ ತಿಂಗಳು ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾದ ಜಿಲ್ಲೆಯ ನಿಕಟಪೂರ್ವ ಸಿಇಒ ಜಿ.ಜಗದೀಶ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಿಡಿಒಗಳ ಕ್ಷೇಮಾಭಿವೃದ್ದಿ ಸಂಘದಿಂದ ಲಕ್ಷಾಂತರರೂ ಖರ್ಚು ಮಾಡಿ ಬೆಳ್ಳಿ ಕಿರೀಟ, ಗಧೆ ಉಡುಗೊರೆಯಾಗಿ ನೀಡಿದೆ ಎಂಬ ಆರ್‍ಟಿಐ ಕಾರ್ಯಕರ್ತರೊಬ್ಬರ ಆರೋಪ ನಿರಾಧಾರ ಎಂದು ಸಂಘದ ಅಧ್ಯಕ್ಷ ಸಂಪರಾಜ್ ತಿಳಿಸಿದರು.ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ನಾವು ಸಿಇಒ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಹಾಕಿದ್ದು, ಬಾಡಿಗೆಗೆ ತಂದಿದ್ದ ಕಿರೀಟ ಹಾಗೂ ಗಧೆಯಾಗಿದ್ದು, ಕಾರ್ಯಕ್ರಮದ ನಂತರ ಅವರಿಗೆ ವಾಪಸ್ಸು ಮಾಡಿದ್ದಾಗಿ ತಿಳಿಸಿದರು. ಜಿ.ಜಗದೀಶ್ ಅವರು ಸಿಇಒ ಆಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆಪಾರದರ್ಶಕ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರು. ಅದಕ್ಕಾಗಿಯೇ ನರೇಗಾ ಯೋಜನೆಯಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಗ್ರಾಮೀಣ ಭಾಗದಲ್ಲಿ ಚೆಕ್‍ಡ್ಯಾಂಗಳ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿಕಾರ್ಯಗಳಿಗೆ ಒತ್ತು ನೀಡಿದ್ದರು, ನಮ್ಮೆಲ್ಲರಿಗೂ ಉತ್ತಮ ಮಾರ್ಗದರ್ಶಕರಾಗಿದ್ದರು.19kolar3

ಆ ನಿಟ್ಟಿನಲ್ಲಿ ಅವರ ವರ್ಗಾವಣೆ ಸಂದರ್ಭದಲ್ಲಿ ಗೌರವದಿಂದ ಬೀಳ್ಕೊಡುವ ಸಲುವಾಗಿ ಆಗಸ್ಟ್ ತಿಂಗಳಿನಲ್ಲಿ ನಡೆದಿದ್ದ ಸಮಾರಂಭದಲ್ಲಿ ಪಿಡಿಒಗಳ ಸಂಘದಿಂದ ಗೌರವ ಸೂಚಿಸಲು ಬೆಳ್ಳಿಯನ್ನು ಹೋಲುವ ಕಿರೀಟ, ಗಧೆಯನ್ನು ಫ್ಯಾನ್ಸಿಸ್ಟೋರ್‍ನಲ್ಲಿ ಬಾಡಿಗೆಗೆ ಪಡೆದು ಸಾಂಕೇತಿಕವಾಗಿ ಧರಿಸಿ, ನಂತರ ಅದನ್ನು ಅಂಗಡಿಗೆ ವಾಪಸ್ಸು ಮಾಡಿದ್ದೇವೆ ಎಂದು ಹೇಳಿಕೊಂಡರು. ಅಂಗಡಿಯಲ್ಲಿ ಬಾಡಿಗೆ ಪಡೆದುಕೊಂಡಿರುವುದಕ್ಕೆ ರಸೀದಿಯು ನಮ್ಮ ಬಳಿ ಇದೆ.ಆದರೆ, ಕೋಲಾರದ ಆರ್‍ಟಿಐ ಕಾರ್ಯಕರ್ತ ಕೆ.ಸಿ.ರಾಜಣ್ಣ ಪಿಡಿಒಗಳ ಸಂಘದಿಂದ ಲಕ್ಷಾಂತರರೂ ಬೆಲೆ ಬಾಳುವ ಬೆಳ್ಳಿ ಕಿರೀಟ, ಗಧೆ ಹಾಗೂ ಚಿನ್ನದ ಉಂಗುರವನ್ನು ಜಿ.ಜಗದೀಶ್ ಸ್ವೀಕರಿಸುವ ಮೂಲಕ ಭ್ರಷ್ಟ ಅಧಿಕಾರಿಯಾಗಿದ್ದಾರೆ ಎಂದು ಟೀಕಿಸಿರುವುದು ಸರಿಯಲ್ಲ ಎಂದರು.

ಆರ್‍ಟಿಐ ಕಾರ್ಯಕರ್ತ ರಾಜಣ್ಣ, ಸಿಇಒ ಅವರು ಈ ಕೂಡಲೇ ಕೊಡುಗೆ ಪಡೆದ ವಸ್ತುಗಳನ್ನು ಜಿಲ್ಲಾಧಿಕಾರಿಗೆ ವಾಪಸ್ಸು ಮಾಡಬೇಕು. ಹಾಗೂ ಭ್ರಷ್ಟ ಪಿಡಿಒಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು, ಹೇಳಿಕೆ ವಾಪಸ್ಸು ಪಡೆದುಕೊಳ್ಳದಿದ್ದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

By suddi9

Leave a Reply

Your email address will not be published. Required fields are marked *