ಬಂಟ್ವಾಳ :  ಬಿಲ್ಲವ ಕಣ್ಮಣಿಗಳ ಅಭಿನಂದನಾ ಸಮಿತಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಂಘಗಳ ಹಾಗೂ ಯುವವಾಹಿನಿ (ರಿ). ಬಂಟ್ವಾಳ ಮತ್ತು ಮಾಣಿ ಘಟಕ ಸಹಯೋಗದೊಂದಿಗೆ ದಶಂರ್ 8 ರಂದು ಬಿ.ಸಿ.ರೋಡಿನಲ್ಲಿ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿರುವ  “ನಮ್ಮ ಬಿರುವೆರ್  ಐಕ್ಯತಾ ಸಮಾವೇಶ 2019″  ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸಜೀಪಮೂಡ ಗ್ರಾಮದ ಬ್ರಹ್ಮ ಶ್ರೀ ನಾರಾಯಣ ಸಭಾ ಭವನದಲ್ಲಿ ಶುಕ್ರವಾರ ನಡೆಯಿತು.

16-24-19-IMG-20191115-WA0011-768x364    ಮಾಜಿ ಶಾಸಕ ಸಮಿತಿಯ ಗೌರವಾಧ್ಯಕ್ಷರಾದ ಎ.ರುಕ್ಮಯ ಪೂಜಾರಿಯವರು ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.ಬಳಿಕ  ಮಾತನಾಡಿದ ಅವರು, ಬಿಲ್ಲವರು ಈ ಜಿಲ್ಲೆಯ ಮೂಲನಿವಾಸಿಗಳಾಗಿದ್ದರೂ, ನಿರೀಕ್ಷಿತ ಸ್ಥಾನಮಾನ ಸಿಗಲಿಲ್ಲ ,ಪ್ರಸ್ತುತ ಸಂಘಟನೆಯನ್ನು ಬಲಿಷ್ಠಗೊಳಿಸುವ ಅಗತ್ಯವಿದ್ದು,ಈ ನಿಟ್ಟಿನಲ್ಲಿ  ಐಕ್ಯತಾ ಸಮಾವೇಶದ ಮೂಲಕ ಸಮಾಜದ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದರು. ಬಿಲ್ಲವರು ನಾಯಕತ್ವದ ಗುಣವನ್ನು ಬೆಳಸಿಕೊಳ್ಳಬೇಕು ಎಂದ ಅವರು ಪ್ರತಿಯೊಬ್ಬರು ಮುಕ್ತ ಮನಸ್ಸಿನಿಂದ ಭಾಗವಹಿಸಿ ಸಮಾವೇಶವನ್ನು    ಯಶಸ್ವಿಗೊಳಿಸುವಂತೆ  ಅವರು ಹೇಳಿದರು. ಸಮಿತಿಯ ಅಧ್ಯಕ್ಷ  ಯಶವಂತ ದೇರಾಜೆ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ, ಈ ಸಮಾವೇಶ ನಮ್ಮ ಶಕ್ತಿಯ ಪ್ರದರ್ಶನಕ್ಕು  ವೇದಿಕೆಯಾಗಲಿದೆ ಎಂದು ಅವರು ಹೇಳಿದರು. ‌

16-24-01-IMG-20191115-WA0022-1068x506

ಸಮಿತಿಯ ಗೌರವಾಧ್ಯಕ್ಷರುಗಳಾದ ಸಂಜೀವ ಪೂಜಾರಿ,  ಮಾಯಿಲಪ್ಪ ಸಾಲ್ಯಾನ್, ಉಪಾಧ್ಯಕ್ಷರುಗಳಾದ ಜಯಂತಿ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ರಾಜೇಶ್ ಬಾಳೆಕಲ್ಲು,  ಸಮಿತಿಯ ಹಾಗೂ ವಿವಿಧ ವಲಯದ ಪ್ರಮುಖರಾದ ಯಶವಂತ ಪೊಳಲಿ, ಬೇಬಿಕುಂದರ್, ಮೋನಪ್ಪ ದೇವಸ್ಯ, ಪುರುಷ ಸಾಲಿಯಾನ್ ನೆತ್ರಕೆರೆ, ವೆಂಕಪ್ಪ ಪೂಜಾರಿ, ಇಂದ್ರೇಶ್, ಸತೀಶ್ ಪೂಜಾರಿ ,ಅನಂದ ಸಾಲಿಯಾನ್, ಶಾರದಾ ಎಮ್, ಪ್ರೇಮನಾಥ ಕೆ, ಸುಂದರ ಪೂಜಾರಿ ಬೋಳಂಗಡಿ, ಲೋಕೇಶ್ ಪೂಜಾರಿ, ಜಯಶಂಕರ್ ಕಾನ್ಸಾಲೆ, ರಮೇಶ್ ಮುಜಲ, ರೋಶನ್ ಅಮೀನ್, ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ, ರಮೇಶ್ ಹೊಸಕಟ್ಟ, ಗಣೇಶ್ ಪೂಜಾರಿ ಪೂಂಜರಕೋಡಿ, ಪ್ರವೀಣ್ ಪೂಜಾರಿ, ಸೀತಾರಾಮ್ ಶಾಂತಿ, ಕೊರಗಪ್ಪ ಪೂಜಾರಿ ಕೊಯಿಲ, ಸುಂದರ ಪೂಜಾರಿ ಬೋಳಿಯಾರ್,ಭವಾನಿ ಎನ್ ಅಮೀನ್, ಸುಜಾತ ಮೋಹನ್ ದಾಸ್ ಪೂಜಾರಿ ಬೊಳ್ಳಾಯಿ ಮತ್ತಿತರರು ಉಪಸ್ಥಿತರಿದ್ದರು. ‌ಸಮಿತಿಯ ಕಾರ್ಯದರ್ಶಿ ಜಗದೀಶ್ ಕೊಯಿಲ ಸ್ವಾಗತಿಸಿ, ಲೋಕೇಶ್ ಸುವರ್ಣ ಅಲೆತ್ತೂರು ವಂದಿಸಿದರು.ಶ್ರೀಧರ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *