ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಲಲಿತ ಪಂಚಮಿಯ ಸಂಭ್ರಮ ನವರಾತ್ರಿಯ ೫ ನೇ ದಿನ ಲಲಿತ ಪಂಚಮಿ ವಿಶೇಷ ದಿನ ಈ ದಿನದಲ್ಲಿ ಸಾವಿರಾರು ಮಂದಿ ದೇವಸ್ಥನಕ್ಕೆ ಭೇಟಿ ನೀಡುತ್ತಾರೆ, ಅದರಲ್ಲಿಯೂ ಕಟೀಲು ದೇವಳಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ, ಈ ದಿನದಲ್ಲಿ ಮಹೀಳಾ ಭಕ್ತರಿಗೆ ಅದರಲ್ಲೂ ಅನ್ನ ಪ್ರಸಾದ ಸ್ವೀಕರಿಸುವ ಭಕ್ತರಿಗೆ ಶ್ರೀ ದೇವರಿಗೆ ಪ್ರಸಾದ ರೂಪವಾಗಿ ಅರ್ಪಿತವಾದ ಸೀರೆಯನ್ನು ಪ್ರಸಾದ ರೂಪವಾಗಿ ನೀಡಲಾಗುತ್ತದೆ, ನಿನ್ನೆ ದೇವಳಕ್ಕೆ ಸುಮಾರು ೭೦ ಸಾವಿರ ಮಂದಿ ಭೇಟಿ ನೀಡಿದರು ಅದರಲ್ಲಿ ೩೦ ಸಾವಿರದಷ್ಟು ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದು , ಸುಮಾರು ೧೫ ಸಾವಿರ ಮಹೀಳಾ ಭಕ್ತರು ಸೀರೆಯನ್ನು ಪ್ರಸಾದ ರೂಪವಾಗಿ ಪಡೆದರು ಸುಮಾರು ೩೫೦ ರಷ್ಟು ಸ್ವಯಂ ಸೇವರು ಬೆಳ್ಳಿಗ್ಗೆಯಿಂದಲೇ ತಮ್ಮ ಸೇವೆಯಲ್ಲಿ ನೀರತರಾಗಿದ್ದರು, ತಡ ರಾತ್ರಿವರೆಗೆ ನಿರಂತರ ಅನ್ನದಾನ ನಡೆಯುತ್ತಿತ್ತು .
lalita panchami (4)

lalita panchami (5)

lalita panchami (2)

lalita panchami (3) ದೇವರಿಗೆ ಅರ್ಪಿತವಾದ ಸೀರೆಯನ್ನು ಸುಮಾರು ೧೫ ವರ್ಷಗಳಿಂದ ನವರಾತ್ರಿಯ ಲಲಿತ ಪಂಚಮಿ ದಿನದಂದು ಭಕ್ತರಿಗೆ ಪ್ರಸಾದ ರೂಪವಾಗಿ ನೀಡುತ್ತಿದ್ದು, ಪ್ರತೀ ವರ್ಷ ಸೀರೆಯನ್ನು ರವಕೆ ಕಣವಾಗಿ ಪರಿವರ್ತಿಸಿ ಭಕ್ತರಿಗೆ ನೀಡಲಾಗುತ್ತಿತ್ತು ಆದರೆ ಈ ವರ್ಷ ಭಕ್ತರಿಗೆ ಇಡೀ ಸೀರೆಯನ್ನು ನೀಡಲಾಯಿತು, ಸಂಜೆ ೬.೩೦ ರಿಂದ ಅನ್ನಪ್ರಸಾದ ವಿತರಣೆಯಾಗಿದ್ದು ತಡ ರಾತಿಯವರೆ ನಡೆದಿತ್ತು, ಅಲ್ಲದೆ ಕ್ಷೇತ್ರಕ್ಕೆ ಭಕರು ಆಗಮಿಸುತ್ತಲೇ ಇದ್ದರು ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥನಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ, ತಮ್ಮ ಇಷ್ಟರ್ಥವನ್ನು ನೇರವೇರಿಸಿದ ದುರ್ಗೆಗೆ ಹರಕೆಗಳನ್ನು ಸಂದಾಯ ಮಾಡುತ್ತಾರೆ, ಕಟೀಲು ದೇಗುಲದಲ್ಲಿ ಭಕ್ತರು ಹಲವು ಹರಕೆಗಳನ್ನು ಸಂದಾಯ ಮಾಡುತ್ತಿದ್ದು, ಭಕ್ತರು ತಮ್ಮ ಮನದಿಚ್ಛೆ ಸಿದ್ಧಿಗೆ, ಸಂಕಷ್ಟ ಪರಿಹಾರಕ್ಕೆ ಕಟೀಲು ದೇವಳದಲ್ಲಿ ವಿಭಿನ್ನ ಹರಕೆಗಳನ್ನು ಸಂಕಲ್ಪಿಸಿ ಸಮರ್ಪಿಸುವುದು ವಾಡಿಕೆ. ಅದರಲ್ಲಿ ಶ್ರೀ ದೇವಿಗೆ ಸೀರೆ ಸಮರ್ಪಣೆಯೂ ಪ್ರಮುಖ ಹರಕೆಯಾಗಿದೆ. ಕಟೀಲು ದೇವಳಕ್ಕೆ ವರ್ಷ ವೋಂದಕ್ಕೆ ಭಕ್ತರಿಂದ ಸುಮಾರು ೨೩ ಸಾವಿರದಷ್ಟು ಸೀರೆ ಸಮರ್ಪಣೆಯಾಗುತ್ತದೆ ಅದರಲ್ಲಿ ಚಂಡಿಕಾಯಾಗ, ರಂಗಪೂಜೆ, ಅಲ್ಲದಾನದಂತಹ ವಿಶೇಷ ಸೇವೆ ಮತ್ತು ಕಟೀಲು ದೇಗುಲಕ್ಕೆ ಆಗಮಿಸುವ ವಿಶೇಷ ಅತಿಥಿಗಳಿಗೆ ಸೇರೆಯನ್ನು ಪ್ರಸಾದ ರೂಪವಾಗಿ ನೀಡಲಾಗುತ್ತದೆ, ಅಲ್ಲದೆ ಕಟೀಲಿನ ಯಕ್ಷಗಾನ ಮೇಳಕ್ಕೂ ನೀಡಲಾಗುತ್ತದೆ, ಕಳೆದ ಮೇ ತಿಂಗಳಿಂದ ಸೀರೆ ಎಲಂ ಪ್ರಕ್ರಿಯೆಯೂ ನಡೆಯುತ್ತಿದೆ. ನಿಶಾಂತ್ ಕಿಲೆಂಜೂರು

By suddi9

Leave a Reply

Your email address will not be published. Required fields are marked *