ಬಂಟ್ವಾಳ : ರಾಜ್ಯಭಾಷೆಯಾಗಿ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಕನ್ನಡ. ಅತ್ಯಂತ ಪ್ರಾಚೀನ ಲಿಪಿಗಳಲ್ಲಿಯೂ ಕೂಡ ಕನ್ನಡ ಭಾಷೆಯು ಸೇರಿಕೊಂಡಿದೆ. ವಿನೋಬಾ ಭಾವೆಯವರು ಕನ್ನಡ ಭಾಷೆಯ ಲಿಪಿಯನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆದಿದ್ದಾರೆ. ಗೋದಾವರಿಯಿಂದ ಕಾವೇರಿಯವರೆಗೆ ಕಂಗೊಳಿಸುವ ನಾಡು ಕನ್ನಡ ನಾಡು ಎಂದು ಗೋಳ್ತಮಜಲು ಸರಕಾರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ನಾರಾಯಣ ಗೌಡ ಹೇಳಿದರು.
ಕಲ್ಲಡ್ಕ ಶ್ರೀರಾಮ ಪದವಿಪೂರ್ವ ವಿದ್ಯಾಲಯದಲ್ಲಿ ’ಪ್ರತಿಭಾರಾಮ’ ಸಾಹಿತ್ಯ ಸಂಘ ಹಾಗೂ ’ಭವಿಷ್’ ಶಿಕ್ಷಕರ ಘಟಕದ ವತಿಯಿಂದ ಆಯೋಜಿಸಿದ ಕನ್ನಡ ಭಾಷೆಯ ಮಹತ್ವ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. ಸಾಹಿತ್ಯ ಸಂಘ ಹಾಗೂ ಭವಿಷ್ ಘಟಕದ ಸದಸ್ಯರು ಉಪಸ್ಥಿತರಿದ್ದರು. ಸಾಹಿತ್ಯ ಸಂಘದ ನಿರ್ದೇಶಕರಾದ ಗೋವಿಂದ ನಾರಾಯಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
