ಬಂಟ್ವಾಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗಕ್ಕೊಳಪಟ್ಟ ಬಿ.ಸಿ.ರೋಡ್ ಘಟಕದ ವಾಹನದಲ್ಲಿ ಮಂಗಳೂರು-ಸ್ಟೇಟ್ ಬ್ಯಾಂಕ್,ಪುತ್ತೂರು ಮಧ್ಯೆ ಕಾರ್ಯಾಚರಿಸುತ್ತಿದ್ದ ಮಾರ್ಗದಲ್ಲಿ ನಗದು ಮೊತ್ತ ನಿರ್ವಾಹಕರಿಗೆ ಸಿಕ್ಕಿರುತ್ತದೆ.
ಈ ನಗದನ್ನು ನಿರ್ವಾಹಕರು ಪ್ರಾಮಾಣಿಕವಾಗಿ ಘಟಕದ ವ್ಯವಸ್ಥಾಪಕರಿಗೆ ಹಸ್ತಾಂತರಿಸಿದ್ದಾರೆ. ಈ ನಗದನ್ನು ಕಳೆದುಕೊಂಡ ಪ್ರಯಾಣಿಕರು ತಮ್ಮ ಪ್ರಯಾಣಿಕರ ಚೀಟಿ ಮತ್ತು ಸೂಕ್ತ ದಾಖಲೆಯೊಂದಿಗೆ ಘಟಕದ ವ್ಯವಸ್ಥಾಪಕರನ್ನು ಭೇಟಿಯಾಗಿ ನಗದನ್ನು ಪಡೆದುಕೊಳ್ಳುವಂತೆ ಕೆ ಎಸ್ ಆರ್ ಟಿ ಸಿಯ ಬಿ.ಸಿ.ರೋಡ್ ಘಟಕದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.