ಬಂಟ್ವಾಳ: ಯೋಗಗುರು ಬಾಬಾರಾಮ್ ದೇವ್ ಅವರು  ಬುಧವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕೇಂದ್ರಕ್ಕೆ ಭೇಟಿ ನೀಡಿ ಶಿಶುಮಂದಿರದಿಂದ ಕಾಲೇಜ್ ವರೆಗಿನ ಮಕ್ಕಳ ಚಟುವಟಿಕೆ,ಶಿಸ್ತು ಕಂಡು ಸಂತಸ ವ್ಯಕ್ತಪಡಿಸಿದರು.        ಶಾಲೆಗೆ ಭೇಟಿ ನೀಡಿದಾಕ್ಷಣ ಗೋಶಾಲೆಯಲ್ಲಿ ಗೋವಿಗೆ ಬಾಳೆಹಣ್ಣು,ಧವಸಧಾನ್ಯವನ್ನು ತಿನ್ನಿಸಿದರು. ಮಕ್ಕಳ ಕೂಪಿಕ ಸಮತೋಲನ ಪ್ರದರ್ಶನವನ್ನು ವೀಕ್ಷಿಸಿದರು.ಬಳಿಕ ಶಿಶುಮಂದಿರಕ್ಕೆ ತೆರಳಿ ಅಲ್ಲಿ ಪುಟಾಣಿ ಮಕ್ಕಳ ಚಟುವಟಿಕೆಯನ್ನು ಕಂಡು ಖುಷಿ ಪಟ್ಟರು. ವೇದವ್ಯಾಸ ಮಂದಿರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿ ನಿಯರ ದಾಂಡೀಯ ನೃತ್ಯವನ್ನು ವೀಕ್ಷಿಸಿದರು.       DSC_0364

ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಬಾಬಾರಾಮ್ ದೇವ್ ಅವರು ತನ್ನ ಬಾಲ್ಯದ ದಿನಗಳಲ್ಲಿ  ಗುರುಕುಲದಲ್ಲಿ  ಪಡೆದಿರುವ ಶಿಕ್ಷಣವನ್ನು ನೆನಪಿಸಿದರು. ಮಾತೃಭಾಷೆ  ಹಾಗೂ ಸಂಸ್ಕೃತ ಕಲಿಕೆಯಿಂದ ಬುದ್ದಿ ವೃದ್ದಿಯಾಗುತ್ತದೆ.ಮನುಷ್ಯ ಜೀವನದಲ್ಲಿ ಕರ್ಮ ಆಧಾರಿತ, ಧರ್ಮ ಆಧಾರಿತ ವ್ಯವಸ್ಥೆಗಳಿವೆ. ಕರ್ಮಾಧಾರಿತದಿಂದ ಕಲಸ ಮಾಡಿದಾಗ ಖುಷಿ ಸಿಗುತ್ತದೆ.ಸ್ವಲ್ಪವು ಕರ್ಮಮಾಡದವರು ರಾಕ್ಷಸ ಸ್ವಭಾವದವರು ಎಂದರು.DSC_0360

 ದೇಶದಲ್ಲಿ ಸತ್ಯ,ನ್ಯಾಯ ,ರಾಮ ಮಾರ್ಗದಲ್ಲಿ ನಡೆದರೆ ಮಾತ್ರ ಬಲಿಷ್ಠ ದೇಶ  ಮತ್ತು ಗೌರವ ಸಮಾಜ ನಿರ್ಮಾಣವಾಗಲಿದೆ ಎಂದ ಅವರು ಭಾರತ ಅತೀ ಶೀಘ್ರದಲ್ಲೇ ವಿಶ್ವಗುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.          ಮನುಷ್ಯ ಜೀವನ ಒಂದು ಬೀಜ ಇದ್ದಾಗೆ ಅದರಲ್ಲಿ ಕಟ್ಟವು ಇದೆ,ಒಳ್ಳೆಯದು ಇದೆ.ಶ್ರೀರಾಮನಿದ್ದಲ್ಲಿ ರಾವಣನು ಇದ್ದ,ಶ್ರೀಕೃಷ್ಣ ಇದ್ದಲ್ಲಿ ಕಂಸನು ಇದ್ದ ಹಾಗೆಯೇ ಮಾನವ ದೇಹಕ್ಕೆ ಹೋಲಿಸಿದರೆ ಆರೋಗ್ಯ,ಅನಾರೋಗ್ಯವು ಇದೆ.ಜೀವನದಲ್ಲಿ ಒಳ್ಳಯ ಬೀಜವನ್ನು ಬೆಳಸಬೇಕು,ಕೆಟ್ಟ ಬೀಜವನ್ನು ಕಿತ್ತೊಗೆಯಬೇಕು ಎಂದರು.DSC_0393

ಶಾಲೆಯ ಸಂಸ್ಥಾಪಕ ಡಾ.ಪ್ರಭಾಕರ್ ಭಟ್ ಅವರು ಎರಡು ದಿನದ ಹಿಂದೆ ಹುಟ್ಟುಹಬ್ಬ ಆಚರಿಸಿದ್ದರು.ಅವರಿಗೆ ಗಿಷ್ಟ್ ರೂಪದಲ್ಲಿ ತಾನಿಂದು ಶಾಲೆಗೆ ಅಗಮಿಸಿದ್ದೆನೆ..ಕಳೆದ 40 ವರ್ಷಗಳಲ್ಲಿ ಶಾಲೆಯನ್ನು ಬೆಳಸಿರುವ ರೀತಿ ಅದ್ಬುತವಾಗಿದೆ. ಭಾರತೀಯ ಸಂಸ್ಕಾರ, ಸಂಸ್ಕೃತಿಯ ಪ್ರತೀಕವಾಗಿರುವ ಈ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಯೋಗಗುರು ಬಾಬಾರಾಮದೇವ್ ಆಶಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಸೋಮಯಾಜಿ,ಪತಂಜಲಿಯ ಕರ್ನಾಟಕದ ಉಸ್ತುವಾರಿ ಪವನ್ ಲಾಲ್ ಆರ್ಯ,ಜಿಲ್ಲಾ ಉಸ್ತುವಾರಿ ರಾಜೇಂದ್ರ,ಸುಜಾತ ಮಂಗಳೂರು,ಕಮಲಾ ಪ್ರಭಾಕರ ಭಟ್,ಶಾಲಾ ಸಂಚಾಲಕ ವಸಂತಮಾಧವ,ಸಹ ಸಂಚಾಲಕ ರಮೇಶ್.ಎನ್., ವೇದಿಕೆಯಲ್ಲಿದ್ದರು.

   ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿ,ವಂದಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ: ಇದೇ ವೇಳೆ ಬಾಬಾರಾಮ್ ದೇವ್ ಅವರು  ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

By suddi9

Leave a Reply

Your email address will not be published. Required fields are marked *