ಮಂಗಳೂರು; ಇಂದುವ ಜನರು ಸಾಮಾಜಿಕ ಜಾಲತಾನ ಹಾಗೂ ಮೊಬೈಲ್ ಲೋಕದಲ್ಲಿ ಮುಳುಗಿದ್ದಾರೆ. ಇದರಿಂದ ಸಾಮಾಜಿಕ ಪ್ರಜ್ಞೆ ನಾಶವಾಗುತ್ತಿದೆ. ಸಮೂಹ ಪ್ರಜ್ಞೆ ಜಾಗದಲ್ಲಿ ಸಮೂಹ ಸನ್ನಿ ಬಿತ್ತಲಾಗುತ್ತಿದೆ. ನಾವು ಓದುವ ಹವ್ಯಾಸ ರೂಢಿಸಿಕೊಳ್ಳದೆ ಹೋದರೆ ಸಂಸ್ಕೃತಿ ಅರಿವು ಹಾಗೂ ಜ್ಞಾನವರ್ಧನೆ ಅಸಾಧ್ಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು. ಅವರು ಮಂಗಳೂರು ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾಭವನದಲ್ಲಿ ನಡೆದ ಮಾಧ್ಯಮ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.

WhatsApp Image 2019-12-12 at 16.28.16
ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಗೊತಿಲ್ಲದ ರೀತಿಯಲ್ಲಿ ಹತ್ತಿರವಾಗಿಬಿಟ್ಟಿದೆ. ಪುಸ್ತವನ್ನು ಆಳವಾಗಿ ಓದುವ ಹವ್ಯಾಸ ನಾವು ಬೆಳೆಸಿಕೊಂಡಿಲ್ಲ. ಸಮೂಹ ಸನ್ನಿ ಜಾಲತಾಣಗಳು ಸಾಮಾಜಿಕ ಪ್ರಜ್ಞೆಯನ್ನು ನಾಶ ಮಾಡಿ ಬಿಟ್ಟಿದೆ. ಪುಸ್ತಕದ ಓದು ಮಾತ್ರ ಸಂಸ್ಕೃತಿ ಉಳಿಸುತ್ತದೆ. ಇತಿಹಾಸದ ಪುಟಗಳನ್ನು ಗಮನಿಸಿದಾಗ ಪತ್ರಿಕಾ ಕ್ಷೆತ್ರದಲ್ಲಿ ಹೆಚ್ಚು ಪ್ರಸಿದ್ದರು ಕಡಲ ತೀರದಿಂದಲೇ ಬಂದವರು ಎಂದರು. ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ಹಾಗೂ ಆಯಾ ಜಿಲ್ಲೆಗಳಲ್ಲಿ ಉಚಿತ ಬಸ್ ಪಾಸ್ ನೀಡುವ ಕುರಿತು ಸರಕಾರದೊಂದಿಗೆ ಮಾತಕತೆ ನಡೆಸಲಾಗಿದ್ದು ಈ ಸೌಲಭ್ಯಗಳು ಶೀಘ್ರವೆ ಪತ್ರಕರ್ತರಿಗೆ ಲಭಿಸಲಿದೆ ಎಂದರು.

ಕರ್ನಾಟಕ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಸಿ. ಲೋಕೇಶ್ ಮಾತನಾಡಿ, ಪತ್ರಕರ್ತರ ಸಂಘದ ಮೂಲಕ ಜನರ ಸ್ಪಂದನೆ ತಕ್ಕ ಕಾರ್ಯಕ್ರಮ ರೂಪಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದರು. ಮೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕ ಸ್ನೇಹಲ್ ರಾಯಮನೆ ಮಾಧ್ಯಮ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರ ಜ್ಞಾನವರ್ಧನೆಗೆ ಈ ಗ್ರಂಥಾಲಯ ಸಹಕಾರಿಯಾಗಲಿ ಎಂದರು. ದ. ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾತನಾಡಿ, ಗ್ರಂಥಾಲಯದ ಸ್ಥಾಪನೆ ಒಳ್ಳೆಯ ಪ್ರಯೋಗ. ಇನ್ನಷ್ಟು ಸೇವೆ ಪತ್ರಕರ್ತರ ಮೂಲಕ ನಡೆಯಲಿ ಎಂದರು.  ದ. ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ರಾಮಚಂದ್ರ ಭಂಡಾರ್‌ಕರ್, ಇಬ್ರಾಹಿಂ ಅಡ್ಕಸ್ಥಳ, ಪುಪ್ಷರಾಜ್ ಬಿ. ಎನ್. ಇದ್ದರು.

By suddi9

Leave a Reply

Your email address will not be published. Required fields are marked *