ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಕಲಾ ಕೇಂದ್ರದ ಭರತನಾಟ್ಯ ತರಗತಿಯ ವಾರ್ಷಿಕ ಸಂಭ್ರಮ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೊಡಂಕಾಪು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಅವರು ಮಾತನಾಡಿ    ಉತ್ತಮ ಕಲಾವಿದನೊಬ್ಬ ದೇಶ ದ ಆಸ್ತಿ , ಉತ್ತಮ ನಾಗರಿಕನಾಗಿ ಇತರರಿಗೆ ಆದರ್ಶನಾಗಬಲ್ಲ, ಕಲೆಯನ್ನು ಒಲಿಸಿಕೊಳ್ಳಲು  ಕಠಿಣ ಪರಿಶ್ರಮ , ತ್ಯಾಗಗಳಿಂದ ಸಾಧ್ಯ ಎಂದು ಹೇಳಿದರು.

IMG-20191213-WA0057

  ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾದ ಸುದರ್ಶನ್ ಜೈನ್ , ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಪತ್ರಕರ್ತ ರಾದ ಜಯಾನಂದ ಪೆರಾಜೆ , ಪುದು ಗ್ರಾಮ  ಪಂಚಾಯತ್ ಸದಸ್ಯ ಭಾಸ್ಕರ್ ರೈ ,  ಸೇವಾಂಜಲಿ ಪ್ರತಿಷ್ಠಾನದ ಕೋಶಾಧಿಕಾರಿ ಗೋವಿಂದ ಶೆಣೈ ಮತ್ತಿತರರು ಉಪಸ್ಥಿತರಿದ್ದರು .ಈ ಸಂದರ್ಭ ನೃತ್ಯ ಗುರು ಗಳಾದ ವಿದುಷಿ ಮಂಜುಳಾ ಸುಬ್ರಮಣ್ಯರವರ ಭರತನಾಟ್ಯ ಸಭಿಕರನ್ನು ಮಂತ್ರ ಮುಗ್ದ ಗೊಳಿಸಿತು.

IMG-20191213-WA0060ನೃತ್ಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ನೃತ್ಯಗುರುಗಳಾದವಿದುಷಿ ಮಂಜುಳಾ ಸುಬ್ರಮಣ್ಯರವರನ್ನು ಸನ್ಮಾನಿಸಿದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿದರು , ಸುಕೇಶ್ ಶೆಟ್ಟಿ ತೇವು  ವಂದಿಸಿದರು.

2 Attachments

By suddi9

Leave a Reply

Your email address will not be published. Required fields are marked *