ಬಂಟ್ವಾಳ: ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುತ್ತು ಗೋಪುರಕ್ಕೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾಕ್ಟರ್ ಪ್ರಭಾಕರ್ ಭಟ್ ಶಿಲಾನ್ಯಾಸವನ್ನು ನೆರವೇರಿಸಿದರು. ಶಿಲಾನ್ಯಾಸದ ಭೂಮಿ ಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ಎನ್. ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಯಶವಂತ ದೇರಾಜೆ, ಪ್ರೇಮ ಜಿ . ಶೆಟ್ಟಿ, ಸುರೇಶ ಬಂಗೇರಬೊಟ್ಟ, ಲಿಂಗಪ್ಪ ದೋಟ, ಜಯಪ್ರಕಾಶ್ ಪೆರ್ವ, ಕೆ .ಸದಾನಂದ ಶೆಟ್ಟಿ, ಯೋಗೀಶ್ ಬೆಲ್ಚಡ ಕೂಳೂರು, ದೇವದಾಸ, ಚಂದ್ರಹಾಸ, ಸಜೀಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಬೆಲ್ಚಡ, ಜಿಲ್ಲಾ ಪಂಚಾಯಿತ್ ಸದಸ್ಯ ಕೆ .ರವೀಂದ್ರ ಕಂಬಳಿ, ಸಜೀಪಮೂಡ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ. ಬಿ. ಶೋಬಿತ್ ಪೂಂಜಾ, ರಮೇಶ ಅನ್ನಪ್ಪಾಡಿ, ಲೋಹಿತ್ ಪಣೋಲಿಬೈಲು, ಸುರೇಶ್ ಪೂಜಾರಿ , ಮೋನಪ್ಪ ಕುಲಾಲ್, ಸತೀಶ್ ಪೆರ್ವ, ರುಕ್ಮಯ್ಯ ಅಣ್ಣಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು
