ಬಂಟ್ವಾಳ: ತಾಪಂ ನ ಅನಿರ್ಬಂಧಿತ ನಿಧಿಯ ಸುಮಾರು 10 ಲಕ್ಷ ಅನುದಾನದಲ್ಲಿ 81 ಜನ ವಿಕಲಚೇತನ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಟೈಲರಿಂಗ್ ಮೆಷಿನ್ ಹಾಗೂ ಗೃಹೋಪಯೋಗಿ ಸೋಲಾರ್ ದೀಪಗಳನ್ನು ವಿತರಿಸಲಾಯಿತು. ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಬಿ.ಸಿ.ರೋಡಿನ ಸಾಮರ್ಥ್ಯ ಸೌಧದಲ್ಲಿ ಸವಲತ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಸದಸ್ಯ ರಾದ ರಮೇಶ್ ಕುಡುಮೇರು, ಧನಲಕ್ಮೀ ಸಿ.ಬಂಗೇರ, ಮಂಜುಳಾಕುಶಲ ಮಂಜೊಟ್ಟಿ,ಇ.ಒ.ರಾಜಣ್ಣ, ಮಂಜುವಿಟ್ಲ ಮತ್ತಿತರರಿದ್ದರು.
