ಬಂಟ್ವಾಳ: ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಮುದಾಯ ಆರೋಗ್ಯ ವಿಭಾಗ, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ(ಊಖS) ಬಂಟ್ವಾಳ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇದರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಮೆಲ್ಕಾರ್ನ ಎ.ಜೆ. ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದಲ್ಲಿ ನಡೆಯಿತು.
ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ತಜ್ಞರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಚರ್ಮರೋಗ ತಜ್ಞರು, ನೇತ್ರ ತಜ್ಞರು ಮತ್ತು ದಂತವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.
ಹುಮಾ ಜುಮಾ ಮಸೀದಿಯ ಶ್ರೀಯಹಿಯತ್ ತಂಙ್ಞಳ್, ಶ್ರೀ ಹಮಾನುಲ್ಲಾ ಖಾನ್, ಊಖS ಕ್ಯಾಪ್ಟನ್ ಶ್ರೀ ಅಬ್ದುಲ್ ಸತ್ತಾರ್, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಶ್ರೀಮತಿ ಶೈಲಾ ಲೋಬೋ, ಸಮುದಾಯ ಆರೋಗ್ಯ ವಿಭಾಗದ ಡಾ.ಪ್ರದೀಪ್ ಸೇನಾಪತಿ, ಡಾ.ಜಯಮಾಲ, ಡಾ. ಚೇತನಾ ಮತ್ತು ಡಾ. ಸಜ್ಜನ್ ಉಪಸ್ಥಿತರಿದ್ದರು.