2006ರ ಏಪ್ರಿಲ್1ರ ನಂತರ ಸರಕಾರದಿಂದಅನುಮೋದನೆ ಪಡೆದಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರಿಗೆಎನ್‍ಪಿಎಸ್, ನಿಶ್ಚಿತ ಪಿಂಚಣಿ, ಡಿಸಿಆರ್‍ಜಿ ಸೌಲಭ್ಯಗಳನ್ನು ಸರಕಾರ ನೀಡದೇಇರುವುದರಿಂದಜನವರಿ10ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿಅಹೋರಾತ್ರಿ ಸತ್ಯಾಗ್ರಹವನ್ನು ಅನಿರ್ಧಿಷ್ಷಾವಧಿಗೆ ನಡೆಸಲುಕರ್ನಾಟಕರಾಜ್ಯಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ನಿರ್ಧರಿಸಿದೆ.

ಈ ಧರಣಿ ಸತ್ಯಾಗ್ರಹದಲ್ಲಿದಕ್ಷಿಣಕನ್ನಡಜಿಲ್ಲಾ ಪಿಂಚಣಿ ವಂಚಿತಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರರು ಸಹ ಭಾಗವಹಿಸಲಿದ್ದು, ಇದರಲ್ಲಿ ಪಾಲ್ಗೊಳ್ಳಲು ಬಯಸುವವರು ಬೆಂಗಳೂರಿನ ಫ್ರೀಡಂ ಪಾರ್ಕ್‍ಗೆಜನವರಿ10ರಂದು ಬಂದು ಪ್ರತಿಭಟನೆಯನ್ನುಬೆಂಬಲಿಸಬೇಕೆಂದುಅನುದಾನಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಮತ್ತುಉಪನ್ಯಾಸಕರ ಸಂಘ ದಕ್ಷಿಣಕನ್ನಡಜಿಲ್ಲೆ ಹಾಗೂ ಕರ್ನಾಟಕರಾಜ್ಯಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತನೌಕರರ ಸಂಘದಜಿಲ್ಲಾಅಧ್ಯಕ್ಷರಾದ ಶ್ರೀ ಗಂಗಾಧರ ಆಳ್ವ, ಕೆ. ಎನ್. ಮನವಿ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *