ಬಂಟ್ವಾಳ  : ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಯುವ ಸಂಸತ್ತಿನ ಪ್ರದರ್ಶನವು ದಿನಾಂಕ 4-01-2020 ರಂದು ಜರುಗಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್ ಎನ್ ಕೂಡೂರುರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಪ್ರಸ್ತುತ ಸರ್ಕಾರಿ ಅಧಿವೇಶನದಂತೆ ಶಿಸ್ತುಬದ್ಧ ಅಧಿವೇಶನ ನಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

 

SHV_2584
ಬಳಿಕ ಭಾರತದ ಸಂಸದೀಯ ಮಾದರಿಯಲ್ಲಿಯೇ ಕಾರ್ಯಕಲಾಪಗಳು ಜರುಗಿತು. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಪ್ರತಿನಿಧಿಗಳು ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಮೊದಲಿಗೆ ಸ್ಪೀಕರಿನ ಆದೇಶದೊಂದಿಗೆ ಯುವ ಮಂತ್ರಿಗಳ ಪ್ರತಿಜ್ಞಾ ಸ್ವೀಕಾರ, ಸಂತಾಪ ಸೂಚಕ ಸಭೆ, ಮಸೂದೆ ಮಂಡನೆ, ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ ಇವೆಲ್ಲವನ್ನೂ ಒಳಗೊಂಡು ಉ.S.ಖಿ , ಸ್ವಚ್ಛಭಾರತ ಅಭಿಯಾನ, ಶಿಕ್ಷಣ ನೀತಿ ಮೊದಲಾದ ಪ್ರಚಲಿತ ವಿಷಯಗಳ ಬಗ್ಗೆ ಚರ್ಚಿಸಿದರು. ಅಲ್ಲದೆ ಅಮೆರಿಕಾದ ಅಧ್ಯಕ್ಷರು ಹಾಗೂ ಜಪಾನಿನ ಸಂಸತ್ತಿನ ನಿಯೋಗವು ಭೇಟಿ ನೀಡುವುದರ ಮೂಲಕ ಅಂತಾರಾಷ್ಟ್ರೀಯ ಭಾಂದವ್ಯವನ್ನು ವೃದ್ಧಿಸುವ ಪ್ರದರ್ಶನವು ಅಧಿವೇಶನಕ್ಕೆ ಮೆರುಗು ನೀಡಿತು.

By suddi9

Leave a Reply

Your email address will not be published. Required fields are marked *