ಮಂಗಳೂರು: ಸರಕಾರದ ಯೋಜನೆಯಾದ ಯುವ ಅರಿವು ಕಾರ್ಯಕ್ರಮದಿಂದ ವ್ಯಕ್ತಿತ್ವ ವಿಕಸನ ಹಾಗೂ ನಮ್ಮ ಸಬಲೀಕರಣ ಸಾಧ್ಯ ಇರುವುದರಿಂದ ಅವುಗಳನ್ನು ಹೆಚ್ಚು ಉಪಯೋಗಿಸಿಕೊಳ್ಳುವಂತೆ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆ ಸಲಹೆ ಮಾಡಿದ್ದಾರೆ. ಅವರು ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಯುವಸ್ಪಂದನ ಘಟಕ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಆಯೋಜಿಸಿದ  ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಯುವ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಅಪಾರ ಶಕ್ತಿ ಹಾಗೂ ಉತ್ಸಾಹ ಹೊಂದಿರುವ ಯುವಜನತೆ ನಮ್ಮ ಶಕ್ತಿ ಯಾಗಿದೆ. ಅವರು ಅನೇಕ ರೀತಿಯ ತೊಂದರೆ ಹಾಗೂ ಸಮಸ್ಯೆ ಎದುರಿಸುತ್ತಿದ್ದಾರೆ. ಯುವ ಕೇಂದ್ರೀತ ನಮ್ಮ ಸಮಾಜದ ಭವಿಷ್ಯ ರೂಪಿಸುವ ದೃಷ್ಟಿಯಿಂದ ಸರಕಾರ ಈ ಯೋಜನೆ ಹಮ್ಮಿಕೊಂಡಿದೆ ಎಂದರು.
DSC07348
ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ಇದರ ರಾಷ್ಟ್ರೀಯ ತರಬೇತುದಾರ ಪ್ರತಿಮ್ ಕುಮಾರ್ ಮಾತನಾಡಿ ನಾವು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬದುಕಬೇಕು. ಅದಕ್ಕೆ ಬೇಕಾಗಿರುವ ವ್ಯವಸ್ಥೆ ಬೆಳೆಸಿಕೊಂಡಾಗ ಅದು ಸಾಧ್ಯ. ಕೆಟ್ಟ ಚಟಗಳಿಂದ ದೂರವಿದ್ದು ಉತ್ತಮ ಜೀವನ ತಮ್ಮದಾಗಿಸಿಕೊಳ್ಳಿ ಎಂದರು. ಯುವ ಸ್ಪಂದನ ಕೇಂದ್ರದ ಡೊಂಬಯ್ಯ ಇಡ್ಕಿದು ಮಾತನಾಡಿ, ಯುವ ಜನರ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಗಳನ್ನು ಪರಿಹರಿಸುವ ಸಲುವಾಗಿ ಯುವ ಸ್ಪಂದನ ಕೇಂದ್ರ ಸ್ಥಾಪನೆಯಾಗಿದೆ. ಅನೇಕ ಯುವಕರು ಹಾಗೂ ಹೆತ್ತವರು ತಮ್ಮ ಮಕ್ಕಳ ಸಮಸ್ಯೆ ಗೆ ಕೇಂದ್ರದಿಂದ ಸಲಹೆ ಹಾಗೂ ಮಾರ್ಗದರ್ಶನ ಪಡೆದು    ಗುಣಮುಖ ರಾಗಿದ್ದಾರೆ ಎಂದರು. ಪ್ರಾಂಶುಪಾಲ ಲಕ್ಷ್ಮೀನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಮಹಾವೀರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ರ ಭಾವಚಿತ್ರ ಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
Attachments area

 

By suddi9

Leave a Reply

Your email address will not be published. Required fields are marked *