ಬಂಟ್ವಾಳ:  ಅಡ್ಯಾರಿನಲ್ಲಿ ಜ.15 ರಂದು  ನಡೆದ ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಯ  “ಕುಂಬಾರನಿಗೆ ವರ್ಷ ಹರ್ಷನಿಗೆ ನಿಮಿಷ “ಎಂದು ಬರೆದ ಬ್ಯಾನರ್ ಪ್ರದರ್ಶಿಸಿ ಕುಂಬಾರ ಸಮುದಾಯಕ್ಕೆ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಸಂಬಂಧಿತ ವ್ಯಕ್ತಿ ಹಾಗೂ ಸಹಕರಿಸಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಂಟ್ವಾಳ ಕುಲಾಲ ಯುವ ವೇದಿಕೆ ಹಾಗೂ ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘವು ಬಂಟ್ವಾಳ ತಹಶೀಲ್ದಾರ್ ಹಾಗೂ ಬಂಟ್ವಾಳ ಠಾಣಾಧಿಕಾರಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು.

IMG-20200117-WA0051  ಪ್ರತಿಭಟನೆಯ ನೆಪದಲ್ಲಿ ಕುಲಾಲ ಸಮುದಾಯವನ್ನು ಅವಮಾನಿಸಿರುವುದನ್ನು ಖಂಡಿಸಿರುವ ಸಂಘವು ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ  ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

IMG-20200117-WA0066
ನಿಯೋಗದಲ್ಲಿ ಬಂಟ್ವಾಳ ತಾಲೂಕು ಕುಲಾಲ ಯುವವೇದಿಕೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ್ ಗೌರವಾಧ್ಯಕ್ಷ ನಾರಾಯಣ ಸಿ ಪೆರ್ನೆ, ಕಾರ್ಯದರ್ಶಿ ಹರಿಪ್ರಸಾದ್ ಬಂಟ್ವಾಳ, ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸುಂದರ್ ಬಿ, ಕಾರ್ಯದರ್ಶಿ ಶೇಷಪ್ಪ ಮಾಸ್ಟರ್, ಸೋಮಪ್ಪ ಮೂಲ್ಯ, ವೇದಿಕೆಯ ಕೋಶಾಧಿಕಾರಿ ಮಾಧವ ಕುಲಾಲ್,ಗೌರವ ಸಲಹೆಗಾರ ಸೋಮನಾಥ ಸಾಲಿಯಾನ್,  ಮಾಜಿ ಅಧ್ಯಕ್ಷ ಆನಂದ ಕುಲಾಲ್, ಕಾರ್ತಿಕ್ ಮಯ್ಯರಬೈಲು, ದೀಪಕ್, ರಾಧಾಕೃಷ್ಣ ಮರ್ತಾಜೆ, ರಮೇಶ್ ಸಿದ್ಧಕಟ್ಟೆ, ಮೋಹನದಾಸ್ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *