ಬಂಟ್ವಾಳ : ಕೊಲೆಯತ್ನ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವ ಬಂಧನಕ್ಕೆ ತೆರಳಿದ್ದ ಪೊಲೀಸ್ ಕಾನ್ಸ್ ಟೇಬಲ್ ರೊಬ್ಬರಿಗೆ ಹಲ್ಲೆಗೈದು,ತಳ್ಳಿಹಾಕಿದ ಪರಿಣಾಮ ಕಾಲಿನ ಮೂಳೆಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳಕ್ಕೆ ಸಮೀಪದ ಸಿದ್ದಕಟ್ಟೆಯ ಕೆರೆಬಳಿ ಗುರುವಾರ ರಾತ್ರಿ ನಡೆದಿದೆ. ತುಂಬೆ ರಾಮಲ್ ಕಟ್ಟೆ ನಿವಾಸಿ ಅಬುಬಕ್ಕರ್ ಎಂಬವರ ಪುತ್ರ ನವಾಜ್( 42) 2015 ರಲ್ಲಿ ನಡೆದ ಕೊಲೆಯತ್ನ ಪ್ರಕರಣವೊಂದರ ಆರೋಪಿಯಾಗಿದ್ದಾನೆ.
ಈತ ಜಾಮೀನು ಪಡೆದಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಸಿ ಕೊಂಡಿದ್ದು, ಇತ್ತೀಚೆಗೆ ಸಿದ್ದಕಟ್ಟೆ ಪರಿಸರದಲ್ಲಿ ತಿರುಗಾಡುತ್ತಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಮಾಹಿತಿಯನ್ನಾಧರಿಸಿ ಸಿದ್ದಕಟ್ಟೆ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್ ಟೇಬಲ್ ಗಳಾದ ಮಹೇಂದ್ರ , ರವಿ,ಮಾಧವ ಅವರು ಆರೋಪಿ ನವಾಜ್ ಸಿದ್ದಕಟ್ಟೆ ಕೆರೆ ಬಳಿ ರುವುದನ್ನು ಖಚಿತಪಡಿಸಿ ಅತನ ಬಂಧನ ಕಾರ್ಯಾಚರಣೆಗೆ ತೆರಳಿದ್ದರು. ಈ ಸಂದರ್ಭ ಆರೋಪಿ ನವಾಜ್ ಪೊಲೀಸ್ ರನ್ನ ಕಂಡು ಪರಾರಿಯಾಗಲು ಯತ್ನಿಸಿದಾಗ ಕಾನ್ಸ್ ಟೇಬಲ್ ಮಹೇಂದ್ರರವರು ಅತನನ್ನ ಹಿಡಿದಾಗ ಉರುಳಾಟ ನಡೆದಿದ್ದು,ಆಗ ಆರೋಪಿ ನವಾಜ್ ಪೊಲೀಸ್ ಸಿಬ್ಬಂದಿ ಮಹೇಂದ್ರ ನನ್ನ ತಗ್ಗು ಪ್ರದೇಶಕ್ಕೆ ತಳ್ಳಿ ಹಾಕಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭ ಇನ್ನಿಬ್ಬರು ಸಿಬ್ಬಂದಿಗಳಾದ ಮಾದವ ಮತ್ತು ರವಿ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಿಂದ ಕಾನ್ಸ್ ಟೇಬಲ್ ಮಹೇಂದ್ರರವರ ಎಡ ಕಾಲಿನ ಮೂಳೆ ಮುರಿತವಾಗಿ ಗಂಭೀರ ಗಾಯಗೊಂಡಿದ್ದು,ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗಾಯಾಳು ಮಹೇಂದ್ರರನ್ನು ಎಸ್ಪಿ ಲಕ್ಷ್ಮೀಪ್ರಸಾದ್ ,ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿ,ಧೈರ್ಯ ತುಂಬಿದ್ದಾರೆ. ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಠಾಣೆ ಆರೋಪಿ ನವಾಜ್ ವಿರುದ್ದ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.2 Attachments