ಬಂಟ್ವಾಳ : ಪುತ್ತೂರು ನಿವಾಸಿ ಹೆನ್ರಿ ಕುಟಿನ್ಹೋ ಅವರು ಮುಡಿಪು ಮಾರ್ಗವಾಗಿ ತಮ್ಮ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ತಮ್ಮ ಹತ್ತು ಸಾವಿರ ನಗದು ಹಾಗೂ ಅಮೂಲ್ಯ ದಾಖಲೆಗಳಿದ್ದ ಪರ್ಸ್ ಕಳೆದುಕೊಂಡಿದ್ದಾರೆ. ಇದು ಗುಡ್ಡೆಯಂಗಡಿ ನಿವಾಸಿ ಯುವಕರಿಗೆ ಬಿದ್ದು ಸಿಕ್ಕಿದ್ದು,
ಪರ್ಸ್‍ನಲ್ಲಿ ದೊರೆತ ಮೊಬೈಲ್ ಸಂಖ್ಯೆಯ ಮೂಲಕ ವಾರೀಸುದಾರರನ್ನು ಸಂಪರ್ಕಿಸಿ ಪರ್ಸನ್ನು ವಾಪಸ್ ಮರಳಿಸಿ ಪ್ರಾಮಾಣೀಕತೆ ಮೆರೆದಿದ್ದಾರೆ.ಪ್ರಾಮಾಣಿಕತೆ ಮೆರೆದ ತಂಡದಲ್ಲಿ ಗುಡ್ಡೆಯಂಗಡಿ ನಿವಾಸಿಗಳಾದ ಜಿ.ಎ. ಅಮಾನುಲ್ಲಾ, ಪಾರೀಸ್, ತೌಸೀಫ್, ಶಾಫಿ, ಸವಾನ್, ರಿಝ್ವಾನ್ ಹಾಗೂ ಇತರರು ಇದ್ದರು.