ಶಿಕ್ಷಕರು ಮತ್ತು ಪೋಷಕರ ಸಹಕಾರವಿದ್ದಾಗ ವಿದ್ಯಾರ್ಥಿಗಳ ಕಲಿಕೆ ಉತ್ತಮವಾಗುತ್ತದೆಜೊತೆಗೆ ಪಾಠೇತರಚಟುವಟಿಕೆ ಮತ್ತು ನಡತೆ ಸುಧಾರಿಸಿ ಮಾನವೀಯ ಮೌಲ್ಯಗಳನ್ನು ಮಕ್ಕಳು ಬೆಳೆಸಿಕೊಳ್ಳುತ್ತಾರೆ ಎಂಬುದಾಗಿ ಮಾಜಿ ಸಚಿವರೂ ಮಂಗಳೂರು ಕ್ಷೇತ್ರದ ಶಾಸಕರೂಆಗಿರುವ ಶ್ರೀ ಯು.ಟಿ. ಖಾದರ್‍ರವರುತುಂಬೆಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಮಾವೇಶ ಹಾಗೂ ಕ್ರೀಡಾಕೂಟದಲ್ಲಿ ಸಾಧಕ ಹಿರಿಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

PARENTS SPORTS MEET PHOTO
ಮುಹಿಯುದ್ದೀನ್‍ಎಜುಕೇಶನಲ್‍ಟ್ರಸ್ಟ್(ರಿ) ಇದರ ಸಂಸ್ಥಾಪಕರಾದಡಾ|| ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್‍ರವರು ಸಮಾರಂಭದಅಧ್ಯಕ್ಷತೆ ವಹಿಸಿದ್ದರು.
ಸಾಧಕ ಹಿರಿಯ ವಿದ್ಯಾರ್ಥಿಗಳಾದ ಡಾ|| ಅನ್ವರ್‍ಅಮೆಮಾರ್ ಸೂಫಿ, ಡಾ|| ಮಹಮ್ಮದ್ ಆಸೀಫ್, ಡಾ|| ಅಭಿಮಾನ್ ಬಲ್ಯಾಯ, ಶ್ರೀ ಜಿ. ಎಸ್. ಗೋಪಾಲ್‍ಇವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಗಣೇಶ್ ಸುವರ್ಣ, ತುಂಬೆಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದಅಧ್ಯಕ್ಷರಾದ ಬಶೀರ್ ತಂಡೇಲ್, ಕಾರ್ಯಕಾರಿ ಸಮಿತಿ ಸದಸ್ಯರು, ರಕ್ಷಕರಾದಹನೀಫ್ ಸಜೀಪ, ನಿವೃತ್ತ ಪ್ರಾಧ್ಯಾಪಕರಾದಶ್ರೀ ಫಲೂಲ್ ಮಾಸ್ಟರ್ ಬೆದ್ರೋಡಿಇವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿಕ್ರೀಡಾಕೂಟದ ಯಶಸ್ಸಿಗೆ ಕಾರಣರಾದದೈಹಿಕ ಶಿಕ್ಷಕರಾದ ಶ್ರೀ ಜಗದೀಶ್‍ರೈ ಬಿ.ನಡುವಳಚ್ಚಿಲ್, ಶ್ರೀ ಸಾಯಿರಾಂ ನಾಯಕ್, ಶ್ರೀಮತಿ ಮೋಲಿ ಎಡ್ನಾಗೊನ್ಸಾಲ್ವ್‍ಸ್‍ಇವರನ್ನುಗೌರವಿಸಲಾಯಿತು.ತುಂಬೆ ಪ. ಪೂ.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಎನ್. ಗಂಗಾಧರ ಆಳ್ವರು ಅಭಿನಂದನಾ ಭಾಷಣ ಮಾಡಿದರು.ರಕ್ಷಕ-ಶಿಕ್ಷಕ ಸಂಘದಉಪಾಧ್ಯಕ್ಷ ನಿಸಾರ್‍ಅಹಮ್ಮದ್ ವಳವೂರು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಜಗದೀಶರೈ ಬಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಹಿರಿಯಉಪನ್ಯಾಸಕರಾದ ಶ್ರೀ ವಿ.ಎಸ್. ಭಟ್ ಸಹಕರಿಸಿದರು.

By suddi9

Leave a Reply

Your email address will not be published. Required fields are marked *