ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾಗೆ ಪ್ರಯಾಣಿಸ ಬೇಕಾಗಿದ್ದ ಏರ್ ಇಂಡಿಯಾ ವಿಮಾನದಲ್ಲಿ ನಿಷ್ಕ್ರಿಯವಾದ ಗ್ರೈನೇಡ್ ಶುಕ್ರವಾರ ಪತ್ತೆಯಾಗಿದೆ.
ಮುಂಬೈ-ಹೈದ್ರಾಬಾದ್- ಜೆದ್ದಾ ನಡುವೆ ಸಂಚರಿಸುವ ಬೋಯಿಂಗ್ 747-400 ವಿಮಾನದಲ್ಲಿ ಈ ಗ್ರೈನೇಡ್ ಪತ್ತೆಯಾಗಿದೆ ಎಂದು ಏರ್ ಇಂಡಿಯಾದ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಜೆದ್ದಾದಲ್ಲಿ ವಿಮಾನ ಲ್ಯಾಂಡಿಂಗ್ ಆದ ನಂತರ ಈ ವಿಷಯ ಸ್ಥಳೀಯ ರಕ್ಷಣಾ ಏಜೆನ್ಸಿ ಗಮನಕ್ಕೆ ಬಂದಿದೆ ಎಂದು ಬಲ್ಲಮೂಲಗಳು ಹೇಳಿವೆ.
ವಿಮಾನವನ್ನು ಗುರುವಾರ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ತದನಂತರ ವಿಮಾನ ಜೆದ್ದಾಗೆ ಪಯಣ ಬೆಳೆಸಿತ್ತು.
ಗ್ರೈನೇಡ್ ಪತ್ತೆಯಾದ ಕಾರಣ ಜೆದ್ದಾ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನವನ್ನು ವಶಕ್ಕೆ ತೆಗೆದು ನಂತರ ಬಿಡುಗಡೆಗೊಳಿಸಿದ್ದಾರೆ. ಈ ಘಟನೆ ಬಗ್ಗೆ ಭಾರತದ ರಕ್ಷಣಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.