ಬಂಟ್ವಾಳ: ನವರಾತ್ರಿ ಹಬ್ಬದ ಕೊನೆಯ ದಿನವಾದ ಶನಿವಾರ ವಿಜಯ ದಶಮಿಯ ಪ್ರಯುಕ್ತ ಬಿ.ಸಿ.ರೋಡಿನ ಶ್ರೀ ಚಂಡಿಕಾ ಪರಮೇಶ್ವರೀ ದೇವಿ ದೇವಸ್ಥಾನದಲ್ಲಿ ತೆನೆ ವಿತರಣೆ ಕಾರ್ಯಕ್ರಮ ನಡೆಯಿತು. ಸಮೃದ್ದಿಯ ಸಂಕೇತವಾಗಿ ಭತ್ತದ ತೆನೆಯನ್ನು ಮನೆಯಲ್ಲಿ ಕಟ್ಟುವ ಮೂಲಕ ಮನೆತುಂಬಿಸಿಕೊಳ್ಳುವ ಪದ್ದತಿ ತುಳುನಾಡಿನಲ್ಲಿ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬತ್ತ ಬೆಳೆಯುವ ಗದ್ದೆಗಳಲಿ ಕಾಂಕ್ರೀಟ್ ಕಾಡು ಬೆಳೆದು ನಿಂತಿರುವುದರಿಂದ ಬತ್ತದ ಪೈರು ಕಾಣಲು ಸಿಗುವುದೇ ಅಪರೂಪವಾಗುತ್ತಿದೆ. ಈ ನಿಟ್ಟಿನಲ್ಲಿ ದೇವಸ್ಥಾನಗಳಲ್ಲಿ ತೆನೆಗಳನ್ನು ವಿತರಿಸುವ ಕಾರ್ಯ ನಡೆಯುತ್ತಿದೆ.
3 (1)

1 (2)

2 (1)
ಬಿ.ಸಿ.ರೋಡಿನ ಶ್ರೀ ಚಂಡಿಕಾ ಪರಮೇಶ್ವರೀ ದೇವಿ ದೇವಸ್ಥಾನದಲ್ಲಿ ಪ್ರತೀ ವರ್ಷ ವಿಜಯದಶಮಿಯಂದು ಭಕ್ತರಿಗೆ ತೆನೆ ವಿತರಿಸಲಾಗುತ್ತದೆ. ತೆನೆ ತುಂಬಿದ ಭತ್ತದ ಪೈರನ್ನು ಜಾಗಂಟೆ, ಚೆಂಡೆಗಳ ನಿನಾದದೊಂದಿಗೆ ದೇವಸ್ಥಾನಕ್ಕೆ ಹೊತ್ತು ತಂದು ಬಳಿಕ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಭಕ್ತರಿಗೆ ಅಗತ್ಯಕ್ಕನುಗುಣವಾಗಿ ತೆನೆಗಳನ್ನು ವಿತರಿಸಲಾಗುತ್ತದೆ. ತೆನೆ ಕಟ್ಟಲು ಬೇಕಾದ ಎಲೆಗಳು ಹಾಗೂ ಮರದ ತೊಗೆಟಯ ದಾರವನ್ನು ದೇವಸ್ಥಾನದಲ್ಲಿಯೇ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ತೆನೆ ಸ್ವೀಕರಿಸಿದರು. ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯರು ಈ ಸಂದರ್ಭ ಹಾಜರಿದ್ದರು.

By suddi9

Leave a Reply

Your email address will not be published. Required fields are marked *