ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಗೆ ಗಣಿ ಇಲಾಖಾಧಿಕಾರಿಗಳು ಮಂಗಳವಾರ ಸಂಜೆ ದಾಳಿ ನಡೆಸಿ ಮರಳುಗಾರಿಕೆಗೆ ಬಳಸಿರುವ ಡ್ರಜ್ಜಿಂಗ್ ಯಂತ್ರ ವೊಂದನ್ನು ವಶ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮುಟ್ಟುಗೋಲು ಹಾಕಿರುವ ಡ್ರಜ್ಜಿಂಗ್ ಯಂತ್ರ ವನ್ನು ಮಂಗಳೂರು ಗಣಿ ಇಲಾಖಾಧಿಕಾರಿಗಳು
ಗಂಜಿಮಠದ ಯಾರ್ಡ್ ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ಪಡೆಯಲು ಗಣಿ ಇಲಾಖೆಗೆ ಪೋನ್ ಕರೆ ಮಾಡಿದರೆ ಅಲ್ಲಿ ಜವಬ್ದಾರಿ ಸ್ಥಾನದಲ್ಲಿರುವ ಯಾವ ಅಧಿಕಾರಿಯೂ ಕರೆ ಸ್ವೀಕಾರ ಮಾಡಿರುವುದಿಲ್ಲ. ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

