ಮಂಗಳೂರು:ಕರೋನಾ ವೈರಸ್ ಮಹಾಮಾರಿಯಿಂದ ರಕ್ಷಣೆ ಮಾಡಿಕೊಳ್ಳಲು ಇಡೀ ದೇಶವನ್ನೇ ಲಾಕ್ ಡಾನ್ ಮಾಡಲಾಗಿದೆ ಈ ನಡುವಲ್ಲಿ ಪ್ರಾಣಿ ಪಕ್ಷಿಗಳು ಆಹಾರ ನೀರು ಸಿಗದೆ ಚಡಪಡಿಸುತ್ತಾ ಇರುವುದನ್ನು ಕಂಡು ಯುವ ಇಂಟಕ್ ಅಧ್ಯಕ್ಷ ಶ್ರೀ ಪುನೀತ್ ಶೆಟ್ಟಿ ನೇತೃತ್ವದಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ನೀಡುತ್ತಿದ್ದಾರೆ.cfa7cf1d-6dd7-48a6-89ff-ffdd91065bd4

ಇವರು ಸುಮಾರು ಕಳೆದ 3 ವಾರಗಳಿಂದ ಈ ಕೆಲಸದಲ್ಲಿ ತೊಡಗಿದ್ದಾರೆ ಇವರೊಂದಿಗೆ ಅಜಿತ್, ಸುಧೀರ್ , ಪ್ರವೀಣ್, ರೋಹಿತ್ ಭಟ್ ಇವರು ಪ್ರಾಣಿಗಳಿಗೆ ನೀರು ಆಹಾರವನ್ನು ಕೊಟ್ಟು ಪ್ರಾಣಿ ಪ್ರೀತಿಯನ್ನು ಮೆರೆದಿದ್ದಾರೆ . ಮನೆಯಲ್ಲಿ ಹೆಚ್ಚಿದ ಆಹಾರವನ್ನು ಹಾಗೆ ಬಿಸಾಡಬೇಡಿ. ನಿಮ್ಮ ಮನೆಯ ಕಂಪೌಂಡ್ ಸುತ್ತಲೂ ಹಾಕಿ ಎಂದು ವಿನಂತಿಸಿಕೊಂಡಿದ್ದಾರೆ

By suddi9

Leave a Reply

Your email address will not be published. Required fields are marked *