ಬಂಟ್ವಾಳ: ಕೊರೊನ ವೈರಸ್ ಹಾವಳಿಯಿಂದ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ಛಾಯಾಗ್ರಾಹಕರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ರಿ)ದಕ್ಷಿಣ ಕನ್ನಡ ಉಡುಪಿ ಜಿಲ್ಲೆ, ಬಂಟ್ವಾಳ ವಲಯದ ಸದಸ್ಯರಿಗೆ ಸುಮಾರು 1ಲಕ್ಷ ಮೌಲ್ಯದ ಪಡಿತರ ಮತ್ತು ದಿನಬಳಕೆಯ ವಸ್ತುಗಳನ್ನೊಳಗೊಂಡ ಮೊದಲ ಹಂತದಲ್ಲಿ 100 ಕಿಟ್ ಗಳನ್ನು ವಿತರಿಸಲಾಯಿತು. ವಲಯ ಟ್ರಸ್ಟ್ ನ ವತಿಯಿಂದ ಹಾಗೂ ಬಂಟ್ವಾಳ ಶಾಸಕರ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರ ಸಹಕಾರದಿಂದ ವಲಯದ ಸರ್ವಸದಸ್ಯರಿಗೂ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಕುಮಾರಸ್ವಾಮಿ ಕನ್ಯಾನ , ಕಾರ್ಯದರ್ಶಿ ವಿಕೇಶ್ ಬಂಟ್ವಾಳ ಛಾಯಕ್ಷೇಮಾ ಚಾರೀಟೆಬಲ್ ಟ್ರಸ್ಟ್ ನ ಸಂಚಾಲಕರಾದ ಅನಂದ್ ಎನ್. ಹಾಗೂ ವಲಯದ ಪದಾಧಿಕಾರಿಗಳು , ಸದಸ್ಯರು ಹಾಜರಿದ್ದರು.