ಬಂಟ್ವಾಳ: ಕೊರೊನಾ ಲಾಕ್ ಡೌನ್ ನ ಮಧ್ಯೆ ಬಂಟ್ವಾಳ ತಾಲೂಕಿನ ತುಂಬೆ ಸಮೀಪದ ಮಜಿ ಎಂಬಲ್ಲಿ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಸುಮಾರು ಎರಡು ವರ್ಷ ಪ್ರಾಯದ ಮರಿ ಚಿರತೆಯನ್ನು ಮೇಲಕ್ಕೆತ್ತಿದ್ದ ಬಂಟ್ವಾಳ ಅರಣ್ಯಾದಿಕಾರಿಯವರ ತಂಡ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. 
ಮಜಿ ಮೋನಪ್ಪ ಎಂಬವರ ಜಮೀನಿನಲ್ಲಿರುವ ಸುಮಾರು 6. ಅಡಿ ಆಳದ ಬಾವಿಗೆ ರಾತ್ರಿ ಹೊತ್ತಿನಲ್ಲಿ ಚಿರತೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ. ಮಾಹಿತಿ ಪಡೆದ ಅರಣ್ಯ, ಅಗ್ನಿ ಶಾಮಕದಳ ಸಿಬ್ಬಂದಿ ಹಾಗೂ ಪೋಲೀಸರು ಕಾರ್ಯಚರಣೆ ನಡೆಸಿ ಮೇಲಕ್ಕೆತ್ತಿದ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ವಲಯ ಅರಣ್ಯಾಧಿಕಾರಿ ಶ್ರೀಧರ್, ಪ್ರೀತಂ, ಜಿತೇಶ್, ಬಾಸ್ಕರ್, ವಿನಯ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ, ಟ್ರಾಫಿಕ್ ಎಸ್.ಐ.ರಾಜೇಶ್ ಮತ್ತು ಸಿಬ್ಬಂದಿಗಳು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಗಳು ಕಾರ್ಯಚರಣೆ ನಡೆಸಿದ್ದರು