ಬಂಟ್ವಾಳ: ಕೇಂದ್ರ ಸರಕಾರದ ಸ್ಟಾರ್ಟ್ ಅಪ್ ಯೋಜನೆಗೆ ಪೂರಕವಾದ ಯೋಚನೆಗಳು ಯುವಕರಲ್ಲಿ ಹೆಚ್ಚಾಗಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.                         ಕೈಯಿಂದ ಮುಟ್ಟದೇ ಬಳಸುವ ಸ್ಯಾನಿಟೈಸರ್ ಡಿಸ್ಪೆಂಸರ್ (ನಿರ್ಮಲಿಕಾರಕ ಯಂತ್ರ) ವನ್ನು ಅಭಿವೃದ್ದಿ ಪಡಿಸಿರುವ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ, ಯುವ ಇಂಜಿನಿಯರ್  ಅರ್ಜುನ್ ಕೆ. ಪೂಂಜಾರನ್ನು ಅಭಿನಂದಿಸಿ, ಸನ್ಮಾನಿಸಿ ಅವರು ಮಾತನಾಡಿದರು.IMG-20200426-WA0050

ಯುವಕರು ಕ್ರಿಯಾತ್ಮಕವಾಗಿ ಯೋಚಿಸಿ  ತಮ್ಮ ಯೋಚನೆಗಳನ್ನು ಕಾರ್ಯರೂಪಕ್ಕೆ ತಂದಾಗ ಸಮಾಜಕ್ಕೆ ಒಳಿತಾಗುವ ಬಹಳಷ್ಟು ಅವಕಾಶಗಳು ಒದಗಿಬರುತ್ತದೆ ಇಂತಹ ಯೋಚನಾಶೀಲ  ಯುವಕರಿಗೆ ಅರ್ಜುನ್ ಪೂಂಜಾ ಮಾದರಿ ಎಂದು ಶಾಸಕ ಖಾದರ್ ಹೇಳಿದರುIMG-20200426-WA0051

ಈ ಸಂಧರ್ಭದಲ್ಲಿ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ  ಸುರೇಶ್ ರೈ ಪೆಲಪಾಡಿ, ಕಾರ್ಯಕರ್ತರಾದ  ಸುಕುಮಾರ್ ಬಂಗೇರ, ಸುಕೇಶ್ ಶೆಟ್ಟಿ ತೇವು, ವಿಕ್ರಮ್ ಬರ್ಕೆ, ಎಫ್ ಗಣೇಶ್ ಕುಮಾರ್, ಲೋಕೇಶ್ ಕಲ್ಲತಡಮೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್,ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *