ಬಂಟ್ವಾಳ: ಕಡೇಶ್ವಾಲ್ಯ ಗ್ರಾಮದ ನಕ್ಕಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಬಂಟ್ವಾಳ ಗ್ರಾಮಾಂತರ ಪೋಲಿಸರು ದಾಳಿ ನಡೆಸಿದ ಘಟನೆ ಗುರುವಾರ ಸಂಜೆ ನಡೆಸಿದ್ದು,ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ಕಡೇಶ್ವಾಲ್ಯ ನಿವಾಸಿಗಳಾದ ರಜಾಕ್ ಮತ್ತು ಅಬುಬಕ್ಕರ್ ಬಂಧಿತ ಆರೋಪಿಗಳಾಗಿದ್ದಾರೆ.ದಾಳಿಯ ವೇಳೆ ವಧೆಗಾಗಿ ತಂದಿಟ್ಟಿದ್ದ 4 ಹೋರಿಗಳನ್ನು ಪೋಲಿಸರು ರಕ್ಷಿಸಿದ್ದಾರೆ.ಆರೋಪಿ ರಜಾಕ್ ಎಂಬಾತನ ಮನೆಯ ಕೊಠಡಿಯೊಂದರಲ್ಲಿ ಅಕ್ರಮವಾಗಿ ಗೋವಧೆ ಮಾಡಲಾಗುತಿತ್ತು ಎಂದು ಆರೋಪಿಸಲಾಗಿದೆ.ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯ ಎಸ್ ಐ ಪ್ರಸನ್ನ ಮತ್ತವರ ಸಿಬ್ಬಂದಿಗಳು ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.